UK-ಚೀನಾ ಸಂಬಂಧಗಳ ʻಸುವರ್ಣ ಯುಗʼ ಮುಗಿದು ಹೋಗಿದೆ: ರಿಷಿ ಸುನಾಕ್

masthmagaa.com:

ಚೀನಾ ವಿರುದ್ದ ಮತ್ತೆ ಓಪನ್‌ ಆಗೇ ದಾಳಿ ಮಾಡಿರೋ ರಿಷಿ ಸುನಾಕ್‌ ಮತ್ತೆ ಚೀನಾ ನಮಗೆ ಬೆದರಿಕೆ ಅಂತ ಹೇಳಿದ್ದಾರೆ. ಬ್ರಿಟಿಷ್‌ ಮೌಲ್ಯ ಹಾಗೂ ಹಿತಾಸಕ್ತಿಗಳಿಗೆ ಚೀನಾ‌ ಒಂದು ರೀತಿ ಸವಾಲಾಗಿದೆ. ಅದನ್ನ ಬೇರೆ ರೀತಿಯಲ್ಲೇ ಹ್ಯಾಂಡಲ್‌ ಮಾಡಬೇಕು. ಬ್ರಿಟನ್‌ನ ಮಾಜಿ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರು ಶುರು ಮಾಡಿದ್ದ ಯುಕೆ-ಚೀನಾ ಸಂಬಂಧಗಳ ʻಸುವರ್ಣ ಯುಗʼ ಮುಗಿದು ಹೋಗಿದೆ. ಜಾಗತಿಕ ವ್ಯವಹಾರಗಳಲ್ಲಿ ಚೀನಾದ ಪಾತ್ರವನ್ನ ನಾವು ಹಾಗೇ ಸುಮ್ನೆ ಇಗ್ನೋರ್‌ ಮಾಡಕಾಗಲ್ಲ. ಇದು ಅಮೆರಿಕ, ಕೆನಡ, ಆಸ್ಟ್ರೇಲಿಯಾ, ಜಪಾನ್‌ ಹಾಗೂ ಇತರ ದೇಶಗಳಿಗೂ ಗೊತ್ತು. ಹೀಗಾಗಿ ನಾವೆಲ್ಲ ಒಟ್ಟಾಗಿ ಕಾಂಪಿಟೇಶನ್‌ನ್ನ ಹೆಚ್ಚಿಸಬೇಕು ಅಂತ ರಿಷಿ ಸುನಾಕ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply