ಬ್ರಿಟನ್‌ ಉಪ ಚುನಾವಣೆಯಲ್ಲಿ ರಿಷಿ ಸುನಾಕ್‌ರ ಕನ್ಸರ್ವೇಟಿವ್‌ ಪಾರ್ಟಿಗೆ ಸೋಲು!

masthmagaa.com:

ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್‌ ಅವರ ಕನ್ಸರ್ವೇಟಿವ್‌ ಪಾರ್ಟಿ ನೆನ್ನೆ ಗುರುವಾರದಂದು ನಡೆದ ಟ್ಯಾಮ್‌ವರ್ತ್‌ ಮತ್ತು ಮಿಡ್‌ ಬೆಡ್‌ಫೋರ್ಡ್‌ಶೈರ್‌ ಉಪಚುನಾವಣೆಯಲ್ಲಿ ಸೋಲನ್ನ ಕಂಡಿದೆ. ಸೇಫ್‌ ಅಂದುಕೊಂಡಿದ್ದ ಎರಡು ಸಂಸದೀಯ ಸ್ಥಾನಗಳನ್ನ ಕಳೆದುಕೊಂಡು ವಿರೋಧ ಪಕ್ಷ ಲೇಬರ್‌ ಪಾರ್ಟಿಗೆ ಬಿಟ್ಟುಕೊಟ್ಟಿದೆ. ಇನ್ನು ಮುಂದಿನ 15 ತಿಂಗಳಲ್ಲಿ ನಡೆಯಲಿರೋ ಸಾರ್ವತ್ರಿಕ ಚುನಾವಣೆಯಲ್ಲಿ ರಿಷಿ ಸುನಾಕ್‌ ಅವರ ಕನ್ಸರ್ವೇಟಿವ್‌ ಪಾರ್ಟಿ ಗೆಲ್ಲೋ ಚ್ಯಾನ್ಸಸ್‌ ಹಾಗೂ ಪಾರ್ಟಿಯ ಸಾಮರ್ಥ್ಯದ ಬಗ್ಗೆ ಸ್ವಲ್ಪ ಯೋಚಿಸುವಂತೆ ಮಾಡಿದೆ. ಅಂದ್ಹಾಗೆ ಲೇಬರ್‌ ಪಾರ್ಟಿಗೆ ಕಳೆದ 10 ವರ್ಷಗಳಲ್ಲಿ ಮೊದಲ ಬಾರಿಗೆ ಅಧಿಕಾರ ಸಿಕ್ಕಿದೆ.

-masthmagaa.com

Contact Us for Advertisement

Leave a Reply