ರೋಹಿಂಗ್ಯಾ ನಿರಾಶ್ರಿತರ ಕುರಿತು ಕೇಂದ್ರದ ವಿರುದ್ದ ಚಾಟಿ ಬೀಸಿದ ಶಶಿ ತರೂರ್‌!

masthmagaa.com:

ಇತ್ತೀಚಿಗಷ್ಟೇ ರಾಷ್ಟ್ರ ರಾಜಧಾನಿಯಲ್ಲಿರೋ ರೋಹಿಂಗ್ಯಾ ನಿರಾಶ್ರಿತರನ್ನ ಫ್ಲಾಟ್‌ಗಳಿಗೆ ಸ್ಥಳಾಂತರ ಮಾಡಲಾಗುತ್ತೆ ಅಂತ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ರು. ಇವರ ಹೇಳಿಕೆಯ ಕೆಲವೇ ಗಂಟೆಗಳ ನಂತರ, ಕೇಂದ್ರ ಗೃಹ ಸಚಿವಾಲಯ ಇದನ್ನ ಅಲ್ಲಗಳೆದು, ಅಕ್ರಮ ವಿದೇಶಿಯರು ದಿಲ್ಲಿಯಲ್ಲಿ ಇರೋದನ್ನ ಖಚಿತಪಡಿಸಿಕೊಳ್ಳುವಂತೆ ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಇದೀಗ ಈ ಬಗ್ಗೆ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಕೇಂದ್ರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಈ ರೀತಿಯ ಗೊಂದಲ UNHCR ಅಂದ್ರೆ ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮೀಷನರ್‌ನಲ್ಲಿ ಕೆಲಸ ಮಾಡಿದ ಭಾರತಕ್ಕೆ ಅವಮಾನಕರ ಅಂತ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿದ ತರೂರ್‌, ʻಸಾವಿರಾರು ವರ್ಷಗಳಿಂದ ನಿರಾಶ್ರಿತರನ್ನ ಸ್ವಾಗತಿಸಿ ಅವ್ರನ್ನ ಸ್ವೀಕರಿಸುವ ಮಾನವೀಯ ಸಂಪ್ರದಾಯವನ್ನ ಭಾರತ ಹೊಂದಿದೆ. ಬಿಜೆಪಿ ದಯವಿಟ್ಟು ಭಾರತೀಯ ನಾಗರಿಕರಿಗೆ ಮೋಸ ಮಾಡಬೇಡಿʼ ಅಂತ ಬರೆದಿದ್ದಾರೆ.

-masthmagaa.com

Contact Us for Advertisement

Leave a Reply