ತೆಲಂಗಾಣ: ರೋಹಿತ್‌ ವೆಮುಲಾ ಪ್ರಕರಣದ ಮರು ತನಿಖೆಗೆ ನಿರ್ಧಾರ!

masthmagaa.com:

ಬರೋಬ್ಬರಿ 8 ವರ್ಷಗಳ ಹಿಂದೆ ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ವ್ಯಾಪಕ ಸುದ್ದಿಯಾಗಿದ್ದ ರೋಹಿತ್‌ ವೆಮುಲಾ ಸಾವಿನ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. 2016ರಲ್ಲಿ ಹೈದರಾಬಾದ್‌ ಯೂನಿವರ್ಟಿಸಿಟಿಯಲ್ಲಿ ಓದ್ತಿದ್ದ ರೋಹಿತ್‌ ವೆಮುಲಾ ಆತ್ಮಹತ್ಯೆ ಮಾಡ್ಕೊಂಡಿದ್ರು. ದಲಿತ ಸಂಘಟನೆಯಲಿದ್ದ ರೋಹಿತ್‌ ಅವ್ರ ಮೇಲೆ ಯೂನಿವರ್ಸಿಟಿ ತಾರತಮ್ಯ ಮಾಡಿ, ಮೇಲೆ ಶಿಸ್ತುಕ್ರಮ ಕೈಗೊಂಡಿದ್ದು ಆತ್ಮಹತ್ಯೆಗೆ ಪ್ರೇರೇಪಣೆಯಾಗಿತ್ತು ಅಂತ ಆರೋಪಿಸಲಾಗಿತ್ತು. ಇದ್ರಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಆಂಧ್ರ ಬಿಜೆಪಿ ಸಂಸದ ಬಂಡಾರು ದತ್ತಾತ್ರೇಯ, ಯೂನಿವರ್ಸಿಟಿ ವೈಸ್‌ ಚಾನ್ಸಲರ್‌ ಸೇರಿದಂತೆ ಹಲವರು ಆರೋಪಿಗಳು ಅಂತ ಹೆಸರಿಸಲಾಗಿತ್ತು. ಆದ್ರೀಗ ತೆಲಂಗಾಣ ಪೋಲಿಸ್‌ ಕ್ಲೋಷರ್‌ ರಿಪೋರ್ಟ್‌ನ ಸಲ್ಲಿಸಿದ್ದಾರೆ. ಅಲ್ಲದೇ ಶಿಸ್ತುಕ್ರಮ ಆತ್ಮಹತ್ಯೆಗೆ ಕಾರಣವಲ್ಲ, ರೋಹಿತ್‌ ವೆಮುಲಾ ದಲಿತರೇ ಅಲ್ಲ. ಈ ವಿಚಾರ ಗೊತ್ತಾಗುತ್ತೆ ಅಂತನೇ ಆತ್ಮಹತ್ಯೆ ಮಾಡ್ಕೊಂಡಿದ್ದಾರೆ ಅಂತ ಕಾಂಗ್ರೆಸ್‌ ಆಡಳಿತದಲ್ಲಿರೋ ತೆಲಂಗಾಣ ಪೋಲಿಸ್‌ ಹೇಳಿದೆ. ಆದ್ರೆ ಕ್ಲೋಷರ್‌ ರಿಪೋರ್ಟ್‌ ಸಲ್ಲಿಕೆಯಾದ ಕೆಲವೇ ಗಂಟೆಗಳಲ್ಲಿ ಸಾರ್ವಜನಿಕರ ಒತ್ತಡದ ಮೇರೆಗೆ ಈ ಪ್ರಕರಣದ ಕುರಿತು ಮರು ತನಿಖೆ ನಡೆಸಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ. ಅಷ್ಟೇ ಅಲ್ದೇ ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ, ರೋಹಿತ್‌ರ ತಾಯಿ, ಸಹೋದರ ಮತ್ತು ಹೈದರಾಬಾದ್‌ ವಿಶ್ವವಿದ್ಯಾಲಯದ ಸ್ಟುಡೆಂಟ್‌ ಲೀಡರ್ಸ್‌ ಹಾಗೂ ಶಿಕ್ಷಕರೊಂದಿಗೆ ಈ ಕುರಿತು ಗುಪ್ತವಾಗಿ ಮಾತುಕತೆ ನಡೆಸಿದ್ದಾರೆ.

-masthmagaa.com

Contact Us for Advertisement

Leave a Reply