ಚಂದ್ರನ ಅಂಗಳದಲ್ಲಿ ಓಡಾಟ ಪ್ರಾರಂಭಿಸಿದ ಪ್ರಗ್ಯಾನ್‌!

masthmagaa.com:

ಭಾರತದ ಮಹತ್ವದ ಯೋಜನೆ ಚಂದ್ರಯಾನ-3 ಕುರಿತು ಮತ್ತೊಂದು ಪ್ರಮುಖ ಅಪ್‌ಡೇಟ್‌ ಬಂದಿದೆ. ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಆದ ಬಳಿಕ ಅದರಿಂದ ಪ್ರಗ್ಯಾನ್‌ ರೋವರ್ ಚಂದ್ರನ ಮೇಲ್ಮೈಗೆ ಇಳಿದ ವಿಡಿಯೋ ಒಂದನ್ನ ಇಸ್ರೋ ಶೇರ್‌ ಮಾಡಿತ್ತು. ಇದೀಗ ಯೋಜಿಸಿದಂತೆಯೇ ರೋವರ್​ನ ಎಲ್ಲ ಚಲನೆಗಳನ್ನ ಪರಿಶೀಲನೆ ಮಾಡಲಾಗಿದೆ. ಜೊತೆಗೆ ರೋವರ್ ಚಂದ್ರನ ಮೇಲೆ ಸುಮಾರು 8 ಮೀಟರ್​ ದೂರವನ್ನು ಯಶಸ್ವಿಯಾಗಿ ಕ್ರಮಿಸಿದೆ. ಇದೇ ವೇಳೆ ರೋವರ್‌ನ LIBS ಹಾಗೂ APXS ಪೇಲೋಡ್‌ಗಳು ಆನ್‌ ಆಗಿದ್ದು, ಎಲ್ಲವೂ ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ ಅಂತ ಇಸ್ರೋ ತಿಳಿಸಿದೆ. ಇತ್ತ ಚಂದ್ರಯಾನ-3 ಮಿಷನ್‌ನ ಸಕ್ಸಸ್‌ಗೆ ಪಾಕಿಸ್ತಾನ ವಿಶ್‌ ಮಾಡಿದೆ. ಈ ಬಗ್ಗೆ ಮಾತಾಡಿರುವ ಪಾಕಿಸ್ತಾನದ ವಿದೇಶಾಂಗ ಇಲಾಖೆ ವಕ್ತಾರೆ ಮುಮ್ತಾಜ್‌ ಜಹ್ರಾ ಬಲೋಚ್‌, ಇದೊಂದು ದೊಡ್ಡ ವೈಜ್ಞಾನಿಕ ಸಾಧನೆಯಾಗಿದ್ದು, ಇಸ್ರೋ ವಿಜ್ಞಾನಿಗಳನ್ನ ಅಪ್ರಿಶಿಯೇಟ್‌ ಮಾಡ್ಬೇಕು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply