ʻಭಾರತʼ 5000 ವರ್ಷಗಳಿಂದ ಜಾತ್ಯಾತೀತ ದೇಶವಾಗಿತ್ತು: ಮೋಹನ್‌ ಭಾಗವತ್‌

masthmagaa.com:

ಇಡೀ ಪ್ರಪಂಚವೇ ಒಂದು ಕುಟುಂಬ ಅಂತ ನಾವು ಹೇಳೋದು ಬರಿ ಮಾತಿಗಲ್ಲ, ಇದು ನಮ್ಮ ಫೀಲಿಂಗ್‌, ಇದನ್ನ ಅರಿತು, ಅರ್ಥ ಮಾಡ್ಕೊಂಡು ಅದರಂತೆ ಎಲ್ಲರೂ ನಡೆದುಕೊಳ್ಳಬೇಕು ಅಂತ RSS ಮುಖ್ಯಸ್ತ ಮೋಹನ್‌ ಭಾಗವತ್‌ ಹೇಳಿದ್ದಾರೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ RSSನ ಕಾರ್ಯಕರ್ತ ʻರಂಗ ಹರಿʼ ಅವರು ಬರೆದಿರೋ ʻಪೃಥ್ವಿ ಸೂಕ್ತ: An Ode To Mother Earth’ ಪುಸ್ತಕದ ಲಾಂಚ್‌ನ ವೇಳೆ ಮಾತನಾಡಿದ ಅವರು ನಾವು ಮಾತೃಭೂಮಿಯನ್ನು ರಾಷ್ಟ್ರೀಯ ಒಗ್ಗಟ್ಟಿಗೆ ಅತಿ ಮುಖ್ಯಭಾಗ ಅಂತ ನಂಬಿದ್ದೇವೆ. ನಮ್ಮ 5,000 ವರ್ಷಗಳ ಹಳೆಯ ಸಂಸ್ಕೃತಿ ಕೂಡ ಜಾತ್ಯಾತೀತವಾಗಿದೆ, ಎಲ್ಲಾ ತತ್ವಜ್ಞಾನಗಳಲ್ಲೂ ಕೊನೆಗೆ ಹೇಳೋದು ಇದನ್ನೇ ಅಂತ ಹೇಳಿದ್ದಾರೆ. ಅಲ್ಲದೇ “ಈ ದೇಶದಲ್ಲಿ ತುಂಬಾ ಡೈವರ್ಸಿಟಿ ಇದೆ, ನೀವ್‌ ನೀವೆ ಜಗಳ ಆಡ್ಬೇಡಿ, ನಾವೆಲ್ಲಾ ಒಂದೇ ಅಂತ ಪ್ರಪಂಚಕ್ಕೆಲ್ಲಾ ತಿಳಿಯೋ ಹಾಗೆ ದೇಶವನ್ನ ಬೆಳೆಸಿ” ಅಂತ ಜನರಿಗೆ ಅಡ್ವೈಸ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply