ರಷ್ಯಾ-ಚೀನಾ ದೇಶಗಳ ಸಂಬಂಧ ಗಟ್ಟಿಯಾಗಿದೆ: ರಷ್ಯಾ ಪ್ರಧಾನಿ

masthmagaa.com:

ಚೀನಾ ಪ್ರವಾಸದಲ್ಲಿರೊ ರಷ್ಯಾ ಪ್ರಧಾನಿ ಮಿಖಾಯಿಲ್‌ ಮಿಶುಸ್ಟಿನ್‌, ಉಭಯ ದೇಶಗಳ ಸಂಬಂಧ ಯಾವಾಗ್ಲೂ ಸ್ಟ್ರಾಂಗ್‌ ಆಗಿರುತ್ತೆ ಅಂತ ಹೇಳಿದ್ದಾರೆ. ಚೀನಾದ ಬೀಜಿಂಗ್‌ಗೆ ಮಂಗಳವಾರ ಭೇಟಿ ನೀಡಿ ಚೀನಾದ ಪ್ರಧಾನಿ ಲಿ ಕಿಯಾಂಗ್‌ ಜೊತೆ ಉಭಯ ದೇಶಗಳ ಆರ್ಥಿಕತೆ ಹಾಗೂ ರಾಜತಾಂತ್ರಿಕತೆ ಕುರಿತು ಚರ್ಚಿಸಿದ್ದಾರೆ. ಈ ವೇಳೆ ಮಿಶುಸ್ಟಿನ್‌ ನಮ್ಮ ಉಭಯ ದೇಶಗಳ ಸಂಬಂಧ ಗಟ್ಟಿಯಾಗಿರುತ್ತೆ ಅಂತ ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಚೀನಾದ ಪ್ರಧಾನಿ ಲಿ ಕಿಯಾಂಗ್‌ ಮಾತನಾಡಿ, ರಷ್ಯಾ ಪ್ರೆಸಿಡೆಂಟ್‌ ಪುಟಿನ್‌ ಹಾಗೂ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ರ ಕಾರ್ಯತಂತ್ರದ ಮಾರ್ಗದರ್ಶನವೇ ರಷ್ಯಾ-ಚೀನಾ ಒಳ್ಳೆಯ ಸಂಬಂಧಕ್ಕೆ ಮುಖ್ಯ ಕಾರಣ. ಉಭಯ ದೇಶಗಳು ಈ ಸಂಬಂಧವನ್ನ ಸ್ಥಿರವಾಗಿ ಮುನ್ನಡೆಸಿಕೊಂಡು ಜಗತ್ತಿಗೆ ಧನಾತ್ಮಕ ಶಕ್ತಿ ತುಂಬಲು ಸಹಕರಿಸಲಿವೆ ಅಂತ ಲಿ ಕಿಯಾಂಗ್‌ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಯುಕ್ರೇನ್‌-ರಷ್ಯಾ ಸಂಘರ್ಷದಲ್ಲಿ ಚೀನಾ ತಟಸ್ಥ ನಿಲುವು ಹೊಂದಿದ್ದು, ಉಭಯ ದೇಶಗಳ ರಿಲೇಷನ್‌ ಮತ್ತಷ್ಟು ಸ್ಟ್ರಾಂಗ್‌ ಆಗ್ತಿದೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply