ರಷ್ಯಾದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ ಅಂತ ಒಪ್ಪಿಕೊಂಡ ಪುಟಿನ್‌!

masthmagaa.com:

ಯುಕ್ರೇನ್‌ ಮೇಲೆ ನಿರಂತರವಾಗಿ ದಾಳಿ ಮಾಡ್ತಿರುವ ರಷ್ಯಾ ಅತಿದೊಡ್ಡ ಆರ್ಥಿಕ ಸವಾಲನ್ನ ಫೇಸ್‌ ಮಾಡ್ತಿದೆ ಅಂತ ಖುದ್ದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಒಪ್ಪಿಕೊಂಡಿದ್ದಾರೆ. ರಷ್ಯಾದ ಅರ್ಥಿಕತೆಯಲ್ಲಿ ಹಣದುಬ್ಬರ ಅಪಾಯಗಳು ಹೆಚ್ಚುತ್ತಿವೆ. ಹೀಗಾಗಿ ಈ ರೀತಿಯ ಕ್ರಿಟಿಕಲ್‌ ಕಂಡೀಷನ್ಸ್‌ಗಳನ್ನ ನಿಯಂತ್ರಣದಲ್ಲಿಡಲು ಸರ್ಕಾರ ಮತ್ತು ಕೇಂದ್ರ ಬ್ಯಾಂಕ್‌ ತಯಾರಿ ಮಾಡ್ಕೋಬೇಕು ಅಂತ ಪುಟಿನ್‌ ಹೇಳಿದ್ದಾರೆ. ಇದೇ ವೇಳೆ ಹಣಕಾಸು ಮಾರುಕಟ್ಟೆಯ ಬದಲಾವಣೆಯಿಂದಾಗಿ ಕಂಪನಿಗಳ ಹೂಡಿಕೆಗೆ ಹೊಡೆತ ಬೀಳುವ ಸಾಧ್ಯತೆಯಿದೆ. ಈ ಕಾರಣಕ್ಕೆ ಸರ್ಕಾರ ಹಾಗೂ ಕೇಂದ್ರ ಬ್ಯಾಂಕ್‌ ಬಳಿ ಇರುವ ಎಲ್ಲಾ ಸೌಲಭ್ಯಗಳನ್ನ ಬಳಸಿಕೊಂಡು ಕೆಲಸ ಮಾಡ್ಬೇಕು ಅಂತ ಪುಟಿನ್‌ ತಿಳಿಸಿದ್ದಾರೆ. ಜೊತೆಗೆ ಹೆಚ್ಚಿನ ಮಟ್ಟದಲ್ಲಿ ಇಂಡಸ್ಟ್ರಿಯಲ್‌ ಔಟ್‌ಪುಟ್‌ ಹೊಂದೋದು ರಷ್ಯಾಗೆ ತುಂಬಾ ಮುಖ್ಯವಾಗಿದೆ ಅಂತ ಪುಟಿನ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply