ರಷ್ಯಾಗೆ ಭಾರತದಿಂದ ರಹಸ್ಯವಾಗಿ ಶಸ್ತ್ರಾಸ್ತ್ರ ಪೂರೈಕೆ? ಲಂಡನ್ ಸಂಸ್ಥೆ ಆರೋಪಿಸಿದ್ದೇನು?

masthmagaa.com:

ಯುಕ್ರೇನ್‌ – ರಷ್ಯಾ ಸಂಘರ್ಷದಲ್ಲಿನ ಶಸ್ತ್ರಾಸ್ತ್ರ ಪೂರೈಕೆಗೆ ಸಂಬಂಧಪಟ್ಟಂತೆ ಈಗ ಭಾರತದ ಹೆಸರು ಕೂಡ ಕೇಳಿ ಬರ್ತಿದೆ. ಯುಕ್ರೇನ್‌ ಮೇಲೆ ಮುಗಿಬಿದ್ದಿರೋ ರಷ್ಯಾಗೆ ಪಶ್ಚಿಮ ದೇಶಗಳಿಂದ ಪಡೆದ ಮಿಲಿಟರಿ ಬಿಡಿ ಭಾಗಗಳನ್ನ ಭಾರತದ ಕೆಲ ಕಂಪನಿಗಳು ಬ್ಲಾಕ್‌ಅಲ್ಲಿ ಅಥ್ವಾ ರಹಸ್ಯವಾಗಿ ಮಾರಾಟ ಮಾಡ್ತಿವೆ ಅಂತ ಲಂಡನ್‌ ಮೂಲದ ಸಂಸ್ಥೆಯೊಂದು ವರದಿ ಮಾಡಿದೆ. ಯುಕ್ರೇನ್‌ನಲ್ಲಿ ರಷ್ಯಾ ಬಳಸಿರೋ ಆಯುಧಗಳ ಅವಶೇಷಗಳು ಸಿಕ್ಕಿದ್ದು ಇದರಲ್ಲಿ ಹಲವು ವೆಪನ್‌ಗಳು ಯೂರೋಪ್ ಹಾಗೂ ಅಮೆರಿಕನ್‌ ಮೇಡ್ ಇದ್ದವು ಅಂತ ಹೇಳಲಾಗ್ತಿದೆ. ವಿಶೇಷವಾಗಿ ಗೈಡೆಡ್ ಮಿಸೈಲ್ ಗಳಿಗೆ ರಷ್ಯಾ ಬಳಸೋದು ಅಮೆರಿಕನ್ ಮೇಡ್ ಜೈರೋಸ್ಕೋಪ್ ಸೆನ್ಸಾರ್ ಗಳನ್ನ. ಈಗ ಯುದ್ಧದ ವೇಳೆ ಸಿಕ್ಕ ಅವಶೇಷಗಳಲ್ಲಿ ಇದರ ಕುರುಹು ಸಿಕ್ಕಿದೆ. ಆದ್ರೆ ಈಗ ಅಮೆರಿಕವಾಗಲೀ, ಯುರೋಪಿನ ದೇಶಗಳು ನೇರವಾಗಿ ಇದನ್ನ ರಷ್ಯಾಗೆ ಮಾರಾಟ ಮಾಡಿಲ್ಲ. ಹೀಗಾಗಿ ಭಾರತದಂತಹ ದೇಶಗಳ ಮೂಲಕ ರಷ್ಯಾ ತರಿಸಿಕೊಳ್ತಿದೆ ಅಂತ ಈಗ ಲಂಡನ್ ನ ರಾಯಲ್ ಯುನೈಟೆಟ್ ಸೆರ್ವಿಸಸ್ ಸಂಸ್ಥೆ ಹೇಳಿದೆ. ಭಾರತದ ಕೆಲ ಖಾಸಗಿ ಕಂಪನಿಗಳು ಇದನ್ನ ಖರೀದಿ ಮಾಡಿ ರಷ್ಯಾಗೆ ಮಾರ್ತಿವೆ ಅನ್ನೋ ರೀತಿ ಈಗ ಆರೋಪ ಕೇಳಿ ಬರ್ತಿದೆ.

-masthmaga.com

Contact Us for Advertisement

Leave a Reply