ವಿಶ್ವಸಂಸ್ಥೆ ಮಾನವ ಹಕ್ಕುಗಳ ಗುಂಪಿಂದ ಮತ್ತೊಮ್ಮೆ ಹೊರಗುಳಿದ ರಷ್ಯಾ!

masthmagaa.com:

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ತನ್ನ ಸ್ಥಾನ ಮರಳಿ ಪಡೆಯುವ ರಷ್ಯಾದ ಪ್ರಯತ್ನವನ್ನ ವಿಶ್ವಸಂಸ್ಥೆ ರಿಜೆಕ್ಟ್‌ ಮಾಡಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ಖಾಲಿಯಿದ್ದ 2 ಸ್ಥಾನಗಳಿಗೆ ವೋಟಿಂಗ್‌ ನಡೆಸಲಾಗಿದೆ. ಈ ವೇಳೆ ಬಲ್ಗೇರಿಯಾ ಮತ್ತು ಅಲ್ಬೇನಿಯಾ ವಿರುದ್ಧ ರಷ್ಯಾ ಸ್ಪರ್ಧಿಸಿದ್ದು, ಕೇವಲ 83 ವೋಟ್‌ಗಳನ್ನ ಪಡೆದುಕೊಂಡಿದೆ. ಇನ್ನು ಈ ವೋಟಿಂಗ್‌ ಪ್ರಕ್ರಿಯೆಯಲ್ಲಿ ಅಲ್ಬೇನಿಯಾ 123 ವೋಟ್‌ ಪಡೆದ್ರೆ, ಬಲ್ಗೇರಿಯಾ 160 ಮತಗಳನ್ನ ಪಡೆದುಕೊಂಡಿದೆ. ಅಂದ್ಹಾಗೆ ರಷ್ಯಾ-ಯುಕ್ರೇನ್‌ ಯುದ್ಧ ಆರಂಭವಾದಾಗ ಹ್ಯುಮನ್‌ ರೈಟ್ಸ್‌ ಕೌನ್ಸಿಲ್‌ನಿಂದ ರಷ್ಯಾವನ್ನ ಹೊರ ಹಾಕಲಾಗಿತ್ತು.

-masthmagaa.com

Contact Us for Advertisement

Leave a Reply