ಪುಟಿನ್‌ ವಿರುದ್ಧದ ಅರೆಸ್ಟ್ ವಾರೆಂಟ್‌ನಿಂದ ಅಲ್ಲಿನ ಅಧಿಕಾರಿಗಳು ಪ್ಯಾನಿಕ್!

masthmagaa.com:

ಯುಕ್ರೇನ್‌ ಮೇಲೆ ದಾಳಿ ಮಾಡಿರೊ ರಷ್ಯಾ ಅಧ್ಯಕ್ಷ ಪುಟಿನ್‌ಗೆ ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಮಿನಲ್‌ ಕೋರ್ಟ್‌ (ICC) ಅರೆಸ್ಟ್‌ ವಾರೆಂಟ್‌ ಜಾರಿ ಮಾಡಿತ್ತು. ಯುಕ್ರೇನ್‌ನಲ್ಲಿನ ಮಕ್ಕಳನ್ನ ಅಕ್ರಮವಾಗಿ ರಷ್ಯಾಗೆ ಸಾಗಿಸಿದ್ದಾರೆ ಅನ್ನೊ ಆರೋಪದ ಮೇಲೆ ಅರೆಸ್ಟ್‌ ವಾರೆಂಟ್‌ ಜಾರಿಯಾಗಿತ್ತು. ಆದ್ರೆ ಆ ಟೈಮಲ್ಲಿ ಇದು ರಷ್ಯಾಗೆ ಸಂಬಂಧವಿಲ್ಲ. ರಷ್ಯಾ ICC ವ್ಯಾಪ್ತಿಯಲ್ಲಿ ಬರಲ್ಲ ಅಂತೆಲ್ಲ ಅಲ್ಲಿನ ಅಧಿಕಾರಿಗಳು ಹೇಳಿದ್ರು. ಆದ್ರೆ ಇದೀಗ ಪುಟಿನ್‌ರಿಗೆ ನೀಡಿರೊ ಅರೆಸ್ಟ್‌ ವಾರೆಂಟ್‌ ಕುರಿತು ರಷ್ಯಾದ ಹಿರಿಯ ಅಧಿಕಾರಿಗಳು ಪ್ಯಾನಿಕ್‌ ಆಗಿದ್ದಾರೆ ಅಂತ ತಿಳಿದು ಬಂದಿದೆ. ICCಯ ಅರೆಸ್ಟ್‌ ವಾರೆಂಟ್‌ಗೆ ಯಾವ ರೀತಿ ರೆಸ್ಪಾನ್ಸ್‌ ಕೊಡಬೇಕು ಅಂತ‌ ಡಿಸ್ಕಸ್‌ ಮಾಡಲು ಸ್ಪೆಶಲ್ ಮೀಟಿಂಗ್‌ ಒಂದನ್ನ ಆಯೋಜಿಸಲಾಗಿತ್ತು ಅಂತ ಕ್ರೆಮ್ಲಿನ್‌ನ ಸಿಬ್ಬಂದಿ ಹೇಳಿದ್ದಾರೆ. ಅಲ್ದೇ ಪುಟಿನ್‌ ವಿರುದ್ಧ ಜಾರಿಯಾಗಿರೊ ಈ ಅರೆಸ್ಟ್‌ ವಾರೆಂಟ್‌, ರಷ್ಯಾದಲ್ಲಿನ ರಾಜಕೀಯ ಸ್ಥಿರತೆಗೆ ಬೆದರಿಕೆಯಾಗಿದೆ. ಹಾಗೂ ವಿದೇಶಗಳಿಗೆ ಪ್ರಯಾಣ ಮಾಡುವ ರಷ್ಯಾ ಅಧ್ಯಕ್ಷರ ಸಾಮರ್ಥ್ಯದ ಮೇಲೂ ಪ್ರಭಾವ ಬೀರುತ್ತೆ ಅಂತ ಕಳವಳ ವ್ಯಕ್ತಪಡಿಸಿದ್ದಾರೆ. ಅಂದ್ಹಾಗೆ ಪುಟಿನ್‌ ವಿರುದ್ದ ಜಾರಿಯಾಗಿರೊ ಅರೆಸ್ಟ್‌ ವಾರೆಂಟ್‌ನಿಂದ ICC ವ್ಯಾಪ್ತಿಯಲ್ಲಿ ಬರುವ ಯಾವುದೇ ದೇಶಗಳಿಗೆ ಪುಟಿನ್ ಪ್ರಯಾಣ ಬೆಳೆಸೋಕಾಗಲ್ಲ, ಯಾಕಂದ್ರೆ ಆ ದೇಶಗಳಲ್ಲಿ ಅವ್ರನ್ನ ಅರೆಸ್ಟ್‌ ಮಾಡಬಹುದು. ಇನ್ನೊಂದ್‌ ಕಡೆ ರಷ್ಯಾ ಯುಕ್ರೇನ್‌ ಸಂಘರ್ಷದಲ್ಲಿ ರಷ್ಯಾ ಮಾಡಿರೋ ಯುದ್ಧ ಅಪರಾಧಗಳ ವಿರುದ್ದ ಸಾಕ್ಷ್ಯಗಳನ್ನ ಕಲೆಕ್ಟ್‌ ಮಾಡಲು ಅಮೆರಿಕದ FBI ಜೊತೆ ಯುಕ್ರೇನ್‌ ಕೆಲಸ ಮಾಡ್ತಿದೆ ಅಂತ ಹೇಳಲಾಗಿದೆ. ಮೊಬೈಲ್‌ ಪೋನ್‌ಗಳ ಮಾಹಿತಿ, ಡಿಎನ್‌ಎ ಸ್ಯಾಂಪಲ್‌ಗಳು ಹಾಗೂ ಯುದ್ಧಭೂಮಿಯಲ್ಲಿ ಕಲೆಕ್ಟ್‌ ಆಗಿರೊ ಮೃತದೇಹಗಳ ಫಾರೆನ್ಸಿಕ್‌ ರಿಪೋರ್ಟ್‌ ಸೇರಿದಂತೆ ಅನೇಕ ಮಾಹಿತಿಗಳನ್ನ ಯುಕ್ರೇನ್ ಕಲೆಕ್ಟ್‌ ಮಾಡ್ತಿದೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply