ಭಾರತಕ್ಕೆ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯತ್ವ ಸಿಗಲೇಬೇಕು: ರಷ್ಯಾ

masthmagaa.com:

ಭಾರತಕ್ಕೆ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನ ಸಿಗಬೇಕು ಅಂತ ವಿಶ್ವಸಂಸ್ಥೆಯಲ್ಲಿ ರಷ್ಯಾ ಮತ್ತೆ ಹೇಳಿದೆ. 77ನೇ ಸಾಮಾನ್ಯ ಸಭೆಯಲ್ಲಿ ರಷ್ಯಾ ಪ್ರತಿನಿಧಿಯಾಗಿ ಆಗಮಿಸಿದ್ದ ರಷ್ಯಾದ ವಿದೇಶಾಂಗ ಸಚಿವ ಸರ್ಗೇ ಲಾವ್ರೋ ಈ ಬಗ್ಗೆ ಮಾತನಾಡಿದ್ದಾರೆ. ಆಫ್ರಿಕಾ, ಏಷ್ಯಾ, ಲ್ಯಾಟಿನ್‌ ಅಮೆರಿಕದ ದೇಶಗಳನ್ನ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಸೇರಿಸಿಕೊಳ್ಳಬೇಕು. ಅದರಲ್ಲೂ ಭಾರತ ಮತ್ತು ಬ್ರೆಜಿಲ್‌ಗಳು ಇದರಲ್ಲಿ ಮುಂದಿವೆ. ಅವನ್ನ ಪರಿಗಣಿಸಲೇಬೇಕು ಅಂತ ಒತ್ತಾಯ ಮಾಡಿದ್ದಾರೆ. ಇನ್ನು ಯುಕ್ರೇನ್‌ನಲ್ಲಿ ನಡೆಸ್ತಿರೋ ಆಕ್ರಮಣವನ್ನ ಸಮರ್ಥನೆ ಮಾಡಿಕೊಂಡಿರೋ ರಷ್ಯಾದ ಪ್ರತಿನಿಧಿ ಈ ಕಾರ್ಯಾಚರಣೆ ಒಂದು ಜನಮತ ಸಂಗ್ರಹ ಅಷ್ಟೇ ಅಂತ ಹೇಳಿಕೊಂಡಿದ್ದಾರೆ. ಜೊತೆಗೆ ಈ ಜನಮತ ಸಂಗ್ರಹದ ವಿರುದ್ದ ಪಾಶ್ಚೀಮಾತ್ಯ ದೇಶಗಳು ದ್ವೇಷ ಹರಡುವ ಮೂಲಕ ರಷ್ಯಾದ ಭಾಗಗಳನ್ನ ತಮಗೆ ಸೇರಿಸಿಕೊಳ್ಳೋಕೆ, ತಮ್ಮ ಒಕ್ಕೂಟದ ಭಾಗವನ್ನಾಗಿಸೋಕೆ ಪ್ರಯತ್ನ ಮಾಡ್ತಿವೆ ಅಂತ ಕಿಡಿಕಾರಿದ್ದಾರೆ. ಅತ್ತ ಚೀನಾ ಕೂಡ ವಿಶ್ವಸಂಸ್ಥೆಯ ಈ ಮಹಾಸಭೆಯಲ್ಲಿ ಮಾತನಾಡಿದ್ದು ಯುಕ್ರೇನ್‌ ಸಮಸ್ಯೆಯನ್ನ ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕು ಅಂತ ಒತ್ತಾಯ ಮಾಡಿದೆ.

-masthmagaa.com

Contact Us for Advertisement

Leave a Reply