META ವಕ್ತಾರನನ್ನ ವಾಂಟೆಡ್‌ ಲಿಸ್ಟ್‌ಗೆ ಸೇರಿಸಿದ ರಷ್ಯಾ! ಯಾಕೆ?

masthmagaa.com:

ಮೆಟಾ ಪ್ಲಾಟ್‌ಫಾರ್ಮ್‌ನ ವಕ್ತಾರ ಆ್ಯಂಡಿ ಸ್ಟೋನ್‌ರನ್ನ ರಷ್ಯಾ ತನ್ನ ವಾಂಟೆಡ್‌ ಲಿಸ್ಟ್‌ಗೆ ಸೇರಿಸಿದೆ. 2022ರ ಅಕ್ಟೋಬರ್‌ನಲ್ಲಿ ಮಾರ್ಕ್‌ ಜುಕರ್‌ಬರ್ಗ್‌ ಒಡೆತನದ ಮೆಟಾ ಸಂಸ್ಥೆಯನ್ನ ಭಯೋತ್ಪಾದಕ ಸಂಸ್ಥೆ ಅಂತ ಆರೋಪಿಸಿ, ಕ್ರಿಮಿನಲ್‌ ತನಿಖೆ ಪ್ರಾರಂಭಿಸಿತ್ತು. ಜೊತೆಗೆ ರಷ್ಯಾದಲ್ಲಿ ಮೆಟಾ ಬಳಕೆ ಮಾಡೋರಿಗೆ ಫೈನ್‌ ಹಾಕೋದಾಗಿ ಹೇಳಿತ್ತು. ಯುಕ್ರೇನ್‌ ಜೊತೆಗಿನ ಸಂಘರ್ಷ ಸ್ಟಾರ್ಟ್‌ ಆದ ಟೈಮ್‌ನಲ್ಲಿ, ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ನ್ನ ರಷ್ಯಾ ಬ್ಲಾಕ್‌ ಮಾಡಿತ್ತು. ಕೇವಲ VPN ಮೂಲಕ ರಷ್ಯಾ ಜನರು ಇವುಗಳ ಆ್ಯಕ್ಸೆಸ್‌ ಪಡೀತಾ ಇದ್ರು. ಈಗ ಮೆಟಾ ವಕ್ತಾರನನ್ನೇ ರಷ್ಯಾ ವಾಂಟೆಡ್‌ ಲಿಸ್ಟ್‌ಗೆ ಸೇರಿಸಿದೆ.

-masthmagaa.com

Contact Us for Advertisement

Leave a Reply