ರಷ್ಯಾ ಮಕ್ಕಳಿಗಾಗಿ ಹೊಸ ಇತಿಹಾಸ ಪುಸ್ತಕ! ಯುಕ್ರೇನ್‌ ಯುದ್ಧ ಸಮರ್ಥನೆ!

masthmagaa.com:

ರಷ್ಯಾ ಶಾಲಾ ಮಕ್ಕಳಿಗೆ ಹೊಸ ಇತಿಹಾಸ ಪುಸ್ತಕವನ್ನ ರಿಲೀಸ್‌ ಮಾಡಿದೆ. ಅದ್ರಲ್ಲಿ ಯುಕ್ರೇನ್‌ ಮೇಲಿನ ಆಕ್ರಮಣವನ್ನ ಸಮರ್ಥಿಸಿಕೊಂಡಿದೆ. 17 ವರ್ಷದ ಮಕ್ಕಳನ್ನ ಗುರಿಯಾಗಿಸಿ ಈ ಇತಿಹಾಸ ಪುಸ್ತಕವನ್ನ ಬರೆಯಲಾಗಿದೆ. ಇಡೀ ಪುಸ್ತಕವನ್ನ ಕೆಲವೇ ತಿಂಗಳಲ್ಲಿ ಬರೆದಿದ್ದು, ಅತಿ ಕಡಿಮೆ ಅವಧಿಯಲ್ಲಿ ಬರೆದ ಪುಸ್ತಕ ಅಂತ ಕರೆಸಿಕೊಂಡಿದೆ. ಶಾಲಾ ಮಕ್ಕಳಿಗೆ ಯುಕ್ರೇನ್‌ ಸಂಘರ್ಷದ ಗುರಿಯನ್ನ ಅರ್ಥ ಮಾಡಿಸುವ ಉದ್ದೇಶವನ್ನ ಈ ಪುಸ್ತಕ ಹೊಂದಿದೆ. ಜೊತೆಗೆ ಯುಕ್ರೇನ್‌ನ್ನ ಸೇನೆ ಹಾಗೂ ನಾಜಿಗಳಿಂದ ಮುಕ್ತಗೊಳಿಸೋದು ಈ ಯುದ್ಧದ ಪ್ರಮುಖ ಗುರಿ ಅನ್ನೊದು ಮಕ್ಕಳಿಗೆ ತಿಳಿಯಬೇಕಿದೆ ಅಂತ ರಷ್ಯಾದ ಶಿಕ್ಷಣ ಸಚಿವ ಸೆರ್ಗಿ ಕ್ರಾವ್ಟ್‌ಸೊವ್‌ ಹೇಳಿದ್ದಾರೆ. ಈ ಪುಸ್ತಕ 1945 ರಿಂದ 21ನೇ ಶತಮನಾದವರೆಗಿನ ರಷ್ಯಾ ಇತಿಹಾಸವನ್ನ ಒಳಗೊಂಡಿದೆ. ಯುಕ್ರೇನ್‌ನಲ್ಲಿ ಈ ವಿಶೇಷ ಸೇನಾ ಕಾರ್ಯಾಚರಣೆ ಕೊನೆಗೊಂಡ ಬಳಿಕ, ನಮ್ಮ ವಿಜಯದ ಬಳಿಕ ಮತ್ತೆ ಪುಸ್ತಕವನ್ನ ಚೇಂಜ್‌ ಮಾಡಲಾಗುತ್ತೆ ಅಂತ ಕ್ರಾವ್ಟ್‌ಸೊವ್‌ ಹೇಳಿದ್ದಾರೆ. ಇನ್ನು ಈ ಬುಕ್‌ ಕ್ರೈಮಿಯಾ ಯುದ್ದವನ್ನ Saving Peace ಅಂದ್ರೆ ಶಾಂತಿಯನ್ನ ಕಾಪಾಡುವಿಕೆ ಅಂತ ಬಣ್ಣಿಸಿದೆ. ಹಾಗೂ ಪಾಶ್ಚಿಮಾತ್ಯ ದೇಶಗಳನ್ನ ಖಂಡಿಸಿದೆ ಎನ್ನಲಾಗಿದೆ. ಆದ್ರೆ ಅಲ್ಲಿನ ಕೆಲ ಇತಿಹಾಸ ತಜ್ಞರು ಈ ಹೊಸ ಪುಸ್ತಕವನ್ನ ಟೀಕಿಸಿದ್ದಾರೆ.

-masthmagaa.com

Contact Us for Advertisement

Leave a Reply