ಅಮೆರಿಕಾ ಕೊಟ್ಟಿದ್ದ ಶಸ್ತ್ರಗಳ ಮೇಲೆ ದಾಳಿ ಮಾಡಿದ ರಷ್ಯಾ: ಯುಕ್ರೇನ್‌ಗೆ ಭಾರಿ ಹೊಡೆತ!

masthmagaa.com:

ಪಶ್ಚಿಮ ಯುಕ್ರೇನ್‌ನ ಲೀವ್‌ ನಗರದ ಮೇಲೆ ದಾಳಿಮಾಡಲಾಗಿದ್ದು ಶತ್ರು ಸೈನ್ಯದ ಅಪಾರ ಪ್ರಮಾಣದ ಸೇನಾ ಪರಿಕರಗಳನ್ನ ನಾಶಪಡಿಸಲಾಗಿದೆ ಅಂತ ರಷ್ಯಾ ಹೇಳಿದೆ.  ಲೀವ್‌ ನಗರದ ಹೊರವಲಯದಲ್ಲಿರೋ ಸೇನಾ ಸಂಗ್ರಹಾಲಯಗಳಲ್ಲಿ ಯೂರೋಪ್‌ ಹಾಗು ಅಮೆರಿಕಾಗಳಿಂದ ಬಂದಿದ್ದ ದೊಡ್ಡ ಮಟ್ಟದ ಶಸ್ತ್ರಾಸ್ತ್ರಗಳನ್ನ ಯುಕ್ರೇನ್‌ ಅಲ್ಲಿ ಸಂಗ್ರಹಿಸಿಕೊಂಡಿತ್ತು.ಕಳೆದ ಆರುದಿನಗಳಿಂದ ಅಲ್ಲಿ ಹಲವು ರೀತಿಯ ಶಸ್ತ್ರಾಸ್ತ್ರಗಳನ್ನ ತುಂಬಿ ಇಡಲಾಗಿತ್ತು. ಈಗ ಅದರ ಮೇಲೆ ನಮ್ಮ ಪ್ಲೇನ್‌ಗಳು ದಾಳಿ ಮಾಡಿ ಎಲ್ಲವನ್ನೂ ನಾಶಪಡಿಸಿದೆ ಅಂತ ರಷ್ಯಾದ ಡಿಫೆನ್ಸ್‌ ಮಿನಿಸ್ಟ್ರಿ ವಕ್ತಾರ ಐಗೋರ್‌ ಕೊನಶಂಕೋವ್ ಹೇಳಿಕೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply