ರಷ್ಯಾಗೆ ರೂಪಾಯಿ ಸಂಕಷ್ಟ! ಬ್ಯಾಂಕ್‌ನಲ್ಲಿ ಹಾಗೇ ಉಳಿದಿದೆ ಕೋಟಿಗಟ್ಟಲೇ ಭಾರತದ ರೂಪಾಯಿ!

masthmagaa.com:

ಭಾರತ ಹಾಗೂ ರಷ್ಯಾ ನಡುವಿನ ದ್ವಿಪಕ್ಷೀಯ ವ್ಯಾಪಾರ ಸಂಬಂಧ ತುಂಬಾ ಉತ್ತಮವಾಗಿದೆ. ಅದ್ರಲ್ಲೂ ಯುಕ್ರೇನ್‌ ಯುದ್ಧದಿಂದಾಗಿ ರಷ್ಯಾದ ಅತಿದೊಡ್ಡ ತೈಲ ಮಾರುಕಟ್ಟೆಯಾಗಿ ಭಾರತ ಹೊರಹೊಮ್ಮಿದೆ. ಇನ್ನು ಭಾರತ ಹಾಗೂ ರಷ್ಯಾ ತಮ್ಮ ನಡುವಿನ ವ್ಯಾಪಾರ ವಹಿವಾಟನ್ನ ಡಾಲರ್‌ನಲ್ಲಿ ಮಾಡದೇ ತಮ್ಮ ತಮ್ಮ ದೇಶೀಯ ಕರೆನ್ಸಿಗಳಲ್ಲಿ ಮಾಡುತ್ತವೆ. ಇದೇ ಈಗ ರಷ್ಯಾಗೆ ಅತಿದೊಡ್ಡ ಸಮಸ್ಯೆಯಾಗಿದೆ. ಈ ವಿಷಯವನ್ನ ಖುದ್ದು ರಷ್ಯಾದ ವಿದೇಶಾಂಗ ಸಚಿವ ಸೆರ್ಗಿ ಲಾವ್ರೋವ್‌ ಹೇಳಿದ್ದಾರೆ. ಶಾಂಘೈ ಸಹಕಾರ ಒಕ್ಕೂಟ (SCO) ಸಭೆಗೆ ಆಗಮಿಸಿದ್ದ ಲಾವ್ರೋವ್‌, ರಷ್ಯಾ ಭಾರತೀಯ ಬ್ಯಾಂಕ್‌ಗಳಲ್ಲಿ ಕೋಟಿಗಟ್ಟಲೇ ಭಾರತೀಯ ರೂಪಾಯಿಯನ್ನ ಕಲೆಕ್ಟ್‌ ಮಾಡಿದೆ. ಆದ್ರೆ ಅದನ್ನ ನಾವು ಬಳಸೋಕೆ ಆಗ್ತಿಲ್ಲ. ಇದು ದೊಡ್ಡ ಪ್ರಾಬ್ಲಮ್‌ ಆಗಿದೆ ಎಂದಿದ್ದಾರೆ. ಜೊತೆಗೆ ನಾವು ಈ ಹಣವನ್ನ ಬಳಸುವ ಅಗತ್ಯವಿದೆ. ಆದ್ರೆ ರೂಪಾಯಿಯನ್ನ ಬೇರೆ ಕರೆನ್ಸಿಗೆ ಕನ್ವರ್ಟ್‌ ಮಾಡಿದ್ರೆ ಮಾತ್ರ ಅದು ಸಾಧ್ಯ. ಈ ಬಗ್ಗೆ ಚರ್ಚಿಸಲಾಗ್ತಿದೆ ಅಂತ ಹೇಳಿದ್ದಾರೆ. ಅಂದ್ಹಾಗೆ ಭಾರತ ರಷ್ಯಾದಿಂದ ಕಚ್ಚಾ ತೈಲ, ರಕ್ಷಣಾ ಉಪಕರಣಗಳು ಸೇರಿದಂತೆ ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತೆ. ಇದಕ್ಕೆಲ್ಲಾ ರೂಪಾಯಿಯಲ್ಲಿ ಪೇ ಮಾಡೋದ್ರಿಂದ ರಷ್ಯಾ ಬಳಿ ಸಾಕಷ್ಟು ಭಾರತೀಯ ಕರೆನ್ಸಿ ಜಮಾ ಆಗಿದೆ. ಆದ್ರೆ ಭಾರತ ರಷ್ಯಾಗೆ ಹೆಚ್ಚಿನ ರಫ್ತು ಮಾಡಲ್ಲ. ಹೀಗಾಗಿ ರಷ್ಯಾ ಸಂಗ್ರಹಿಸಿರೊ ರೂಪಾಯಿ ಕರೆಕ್ಟ್‌ ಆಗಿ ಬಳಕೆಯಾಗ್ತಿಲ್ಲ. ಬೇರೆ ದೇಶದ ಜೊತೆಗೆ ರೂಪಾಯಿಯನ್ನ ಬಳಸಿ ವ್ಯವಹಾರ ಮಾಡೋದಕ್ಕೆ, ರೂಪಾಯಿ ಜಾಗತಿಕ ಕರೆನ್ಸಿ ಅಲ್ಲ. ಇದು ರಷ್ಯಾದ ಕಳವಳಕ್ಕೆ ಕಾರಣವಾಗಿದೆ. ಇನ್ನು 2022-23ರ ಆರ್ಥಿಕ ವರ್ಷದಲ್ಲಿ ಭಾರತ ರಷ್ಯಾಗೆ ಮಾಡಿದ ರಫ್ತು 11.6%ಗೆ ಇಳಿಕೆಯಾಗಿದ್ದು, ಕೇವಲ 2.8 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 22.9 ಸಾವಿರ ಕೋಟಿ ರೂಪಾಯಿ ರಫ್ತು ಮಾಡಿದೆ. ಆದ್ರೆ ಇದೇ ವೇಳೆ ರಷ್ಯಾದಿಂದ ಮಾಡಿಕೊಂಡ ಆಮದು 5 ಪಟ್ಟು ಹೆಚ್ಚಾಗಿ 41.56 ಬಿಲಿಯನ್‌ ಡಾಲರ್‌ಗೆ ಅಂದ್ರೆ ಸುಮಾರು 3.4 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಸೋ ಇಲ್ಲಿ ಎರಡು ದೇಶಗಳ ನಡುವಿನ ವ್ಯಾಪಾರ ಬ್ಯಾಲೆನ್ಸ್‌ ಆಗಿಲ್ಲ. ಹೀಗಾಗಿ ರಷ್ಯಾ ತನ್ನ ಆತಂಕ ಹೊರಹಾಕಿದೆ. ಇನ್ನು ಯುಕ್ರೇನ್‌ ಯುದ್ಧದಿಂದ ರಷ್ಯಾದ ಬ್ಯಾಂಕ್‌ಗಳ ಮೇಲೆ ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳು ನಿರ್ಬಂಧ ಹೇರೋಕೆ ಸ್ಟಾರ್ಟ್‌ ಮಾಡಿದ ಕಾರಣ, ಭಾರತಕ್ಕೆ ತನ್ನ ದೇಶೀಯ ಕರೆನ್ಸಿಯಲ್ಲಿ ವ್ಯವಹಾರ ಮಾಡೋಕೆ ರಷ್ಯಾ ಉತ್ತೇಜನ ನೀಡ್ತು. ಯಾಕಂದ್ರೆ ನಿರ್ಬಂಧಗಳ ಕಾರಣದಿಂದ ಭಾರತ ರಷ್ಯಾಗೆ ಡಾಲರ್‌ನಲ್ಲಿ ಪಾವತಿ ಮಾಡೋ ಹಾಗಿದ್ದಿಲ್ಲ. ಆದ್ರೆ ಈಗ ಆ ಹಣವನ್ನ ಸರಿಯಾಗಿ ಬಳಸಿಕೊಳ್ಳೊಕೆ ಆಗ್ತಿಲ್ಲ ಅನ್ನೊದು ರಷ್ಯಾದ ಆರೋಪವಾಗಿದೆ. ಅಲ್ದೇ ಭಾರತದ ಜೊತೆಗೆ ದೇಶೀಯ ಕರೆನ್ಸಿಯಲ್ಲಿ ಮಾಡ್ತಿರೊ ವ್ಯಾಪಾರ ವಹಿವಾಟನ್ನ ಸಸ್ಪೆಂಡ್‌ ಮಾಡೋದಾಗಿ ಯೋಜಿಸಲಾಗ್ತಿದೆ ಅಂತ ಮೂಲಗಳು ತಿಳಿಸಿವೆ. ಇನ್ನು ರೂಪಾಯಿ-ರುಬಲ್‌ ವ್ಯಾಪಾರ ಸಸ್ಪೆಂಡ್‌ ಆದ್ರೆ, ಭಾರತೀಯ ಆಮದುದಾರರಿಗೆ ಸಂಕಷ್ಟ ಎದುರಾಗಲಿದೆ. ರೂಪಾಯಿಯನ್ನ ಕನ್ವರ್ಟ್‌ ಮಾಡೋ ವೆಚ್ಚ ಭಾರತೀಯ ಆಮದುದಾರರಿಗೆ ಹೊರೆಯಾಗಲಿದೆ.

-masthmagaa.com

Contact Us for Advertisement

Leave a Reply