ರಷ್ಯಾ ಮೇಲೆ ಡ್ರೋನ್‌ ದಾಳಿ ಹೆಚ್ಚಿಸಿದ ಯುಕ್ರೇನ್‌!

masthmagaa.com:

ರಷ್ಯಾ ಹಾಗೂ ಯುಕ್ರೇನ್‌ ಯುದ್ಧ ಮುಂದುವರೆದಿದೆ. ಇತ್ತೀಚೆಗೆ ಕಪ್ಪು ಸಮುದ್ರ ಧಾನ್ಯ ಒಪ್ಪಂದದಿಂದ ರಷ್ಯಾ ಹಿಂದೆ ಸರಿದ ನಂತ್ರ ಈ ಭಾಗದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಇದೀಗ ಕಪ್ಪು ಸಮುದ್ರದಲ್ಲಿ ಯುಕ್ರೇನ್‌ನ ಹಡಗೊಂದನ್ನ ರಷ್ಯಾ ತನ್ನ ಸುಖೋಯ್ -30 ಜೆಟ್‌ನ ಮೂಲಕ ಡೆಸ್ಟ್ರಾಯ್‌ ಮಾಡಲಾಗಿದೆ ಅಂತ ಹೇಳಿದೆ. ಇನ್ನೊಂದ್‌ ಕಡೆ ರಷ್ಯಾ ರಾಜಧಾನಿ ಮಾಸ್ಕೋವನ್ನ ಟಾರ್ಗೆಟ್‌ ಮಾಡೋದನ್ನ ಯುಕ್ರೇನ್‌ ಕಂಟಿನ್ಯೂ ಮಾಡಿದೆ. ಸತತ ನಾಲ್ಕನೇ ಬಾರಿಗೆ ಮಾಸ್ಕೋ ರೀಜನ್‌ನಲ್ಲಿ ಡ್ರೋನ್‌ ದಾಳಿ ಮಾಡಿದೆ. ಈ ಡ್ರೋನ್‌ಗಳನ್ನ ತಡೆಯಲಾಗಿದ್ದು, ಯಾವುದೇ ಹಾನಿ ಸಂಭವಿಸಿಲ್ಲ ಅಂತ ರಷ್ಯಾ ಹೇಳಿದೆ.

-masthmagaa.com

Contact Us for Advertisement

Leave a Reply