ನ್ಯೂಕ್ಲಿಯರ್‌ ಒಪ್ಪಂದಕ್ಕೆ ಸಹಿ ಹಾಕಿದ ರಷ್ಯಾ-ಬುರ್ಕಿನಾ ಫಾಸೋ!

masthmagaa.com:

ಬುರ್ಕಿನಾ ಫಾಸೋದಲ್ಲಿ ಪರಮಾಣು ಘಟಕ ನಿರ್ಮಿಸಲು ರಷ್ಯಾ ಮುಂದಾಗಿದೆ. ಈ ಹಿನ್ನಲೆಯಲ್ಲಿ ರಷ್ಯಾ ಹಾಗೂ ಬುರ್ಕಿನಾ ಫಾಸೋ ಒಪ್ಪಂದಕ್ಕೆ ಸಹಿ ಹಾಕಿವೆ. ಇಂಧನದ ಅಗತ್ಯತೆಯನ್ನ ಪೂರೈಸಲು ಬುರ್ಕಿನಾ ಫಾಸೋದಲ್ಲಿ ಈ ನ್ಯೂಕ್ಲಿಯರ್‌ ಪವರ್‌ ಪ್ಲಾಂಟ್‌ನ್ನ ನಿರ್ಮಿಸಲಾಗ್ತಿದೆ ಅಂತ ಅಲ್ಲಿನ ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಅಂದ್ಹಾಗೆ ಕಳೆದ ಜುಲೈನಲ್ಲಿ ಉಭಯ ದೇಶಗಳ ನಡುವೆ ನಡೆದ ಶೃಂಗಸಭೆಯಲ್ಲಿ ಬುರ್ಕಿನಾ ಫಾಸೋದ ಅಧ್ಯಕ್ಷ ಕ್ಯಾಪ್ಟನ್‌ ಇಬ್ರಾಹಿಂ ಟ್ರಾರ್‌ ಅವ್ರು ತಮ್ಮ ಇಚ್ಛೆ ವ್ಯಕ್ತಪಡಿಸಿದ್ದರು. ಈ ಕಾರಣಕ್ಕೆ ಇದೀಗ ಒಪ್ಪಂದ ಮಾಡಕೊಳ್ಳಲಾಗಿದ್ದು, ಇದು ರಷ್ಯಾ ಮತ್ತು ಬುರ್ಕಿನಾ ನಡುವಿನ ಮೊದಲ ನ್ಯೂಕ್ಲಿಯರ್‌ ಒಪ್ಪಂದವಾಗಿದೆ ಅಂತ ತಿಳಿಸಲಾಗಿದೆ.

-masthmagaa.com

Contact Us for Advertisement

Leave a Reply