10 ವರ್ಷಗಳ ನಂತರ ರಷ್ಯಾ, ಟರ್ಕಿ ಹಾಗೂ ಸಿರಿಯಾ ರಕ್ಷಣಾ ಸಚಿವರ ಮಾತುಕತೆ!

masthmagaa.com:

ರಷ್ಯಾ, ಟರ್ಕಿ ಹಾಗೂ ಸಿರಿಯಾ ದೇಶಗಳ ರಕ್ಷಣಾ ಸಚಿವರು 10 ವರ್ಷಗಳ ನಂತರ ಮೊದಲ ಬಾರಿಗೆ ಮಾತುಕತೆ ನಡೆಸಿದ್ದಾರೆ. ಅದ್ರಲ್ಲೂ ಟರ್ಕಿ ಹಾಗೂ ಸಿರಿಯಾ ದೇಶಗಳ ನಡುವೆ 2011ರಲ್ಲಿ ಯುದ್ದ ನಡೆದಾಗಿನಿಂದ ಮೊದಲ ಬಾರಿಗೆ ಉಭಯ ದೇಶದ ಸಚಿವರು ಮೀಟ್‌ ಆಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಿರಿಯಾದಲ್ಲಿರೊ ಕುರ್ದಿಶ್‌ ಗುಂಪಿನ ವಿರುದ್ದ ಸೇನಾ ಆಕ್ರಮಣ ಮಾಡೋದಾಗಿ ಟರ್ಕಿ ಅಧ್ಯಕ್ಷ‌ ತಾಯಿಪ್‌ ಎರ್ಡೋಆನ್ ಬೆದರಿಕೆ ನೀಡ್ತಿದ್ರು. ಇದರ ಹಿನ್ನಲೆಯಲ್ಲಿ ಈ ಸಭೆಯನ್ನ ನಡೆಸಲಾಗಿದೆ. ಸಭೆಯಲ್ಲಿ ನಿರಾಶ್ರಿತರ ಸಮಸ್ಯೆ, ಉಗ್ರವಾದಿಗಳನ್ನ ಜೊತೆಯಾಗಿ ಎದುರಿಸೋ ಬಗ್ಗೆ ಚರ್ಚಿಸಲಾಗಿದೆ. ಅಂದ್ಹಾಗೆ ರಷ್ಯಾ ಹಾಗೂ ಟರ್ಕಿ ಎರಡು ಸಿರಿಯಾ ರಾಜಕೀಯದಲ್ಲಿ ಭಾಗಿಯಾಗಿವೆ. ಸಿರಿಯಾದ ಆಡಳಿತವನ್ನ ರಷ್ಯಾ ಬೆಂಬಲಿಸಿದ್ರೆ, ಅಲ್ಲಿರೊ ಬಂಡಾಯಗಾರರನ್ನ ಟರ್ಕಿ ಬೆಂಬಲಿಸ್ತಿದೆ.

-masthmagaa.com

Contact Us for Advertisement

Leave a Reply