ಕಳೆದ 24 ಗಂಟೆಗಳಲ್ಲಿ ಯುಕ್ರೇನ್‌ ಮೇಲೆ 34 ವಾಯುದಾಳಿ ನಡೆಸಿದೆ ರಷ್ಯಾ!

masthmagaa.com:

ಯುಕ್ರೇನ್‌ ರಷ್ಯಾ ಇವರಿಬ್ಬರ ಬಡಿದಾಟ ಸದ್ಯಕ್ಕೆ ನಿಲ್ಲೋ ಲಕ್ಷಣ ಕಾಣಿಸ್ತಿಲ್ಲ. ಯಾವುದೇ ಪಾಸ್‌ ಅಂದ್ರೆ ವಿರಾಮ ಇಲ್ದೇ ಮೇಲಿಂದ ಮೇಲೆ ಯುಕ್ರೇನ್‌ ನಗರಗಳ ಮೇಲೆ ರಷ್ಯಾ ತನ್ನ ದಾಳಿಯನ್ನ ಮಾಡ್ತಾನೇ ಇದೆ. ಈ ಕುರಿತು ಮಾತಾಡಿದ ಯುಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ, ಕಳೆದ 24 ಗಂಟೆಗಳಲ್ಲಿ ರಷ್ಯಾ ನಮ್ಮ ಮೇಲೆ ಒಟ್ಟು 34 ವಾಯು ದಾಳಿ ಮಾಡಿದೆ. ಡಾನೆಸ್ಕ್‌ ಪ್ರದೇಶದ ಚಾಸಿವ್‌ ಯಾರ್‌ ನಗರದ ಮೇಲೆ ನಡೆದ ದಾಳಿಯಲ್ಲಿ 5 ಜನರು ಮೃತಪಟ್ಟಿದ್ದಾರೆ ಅಂತ ಹೇಳಿದ್ದಾರೆ. ಹಾಗೂ ಯುಕ್ರೇನ್‌ ಅಧ್ಯಕ್ಷರ ಕಚೇರಿ ಕೂಡ ಚಾಸಿವ್‌ ಯಾರ್‌ ಮೇಲಿನ ದಾಳಿಯನ್ನ ಭಯೋತ್ಪಾದಕ ದಾಳಿ ಅಂತ ಕೆರದಿದೆ.

-masthmagaa.com

Contact Us for Advertisement

Leave a Reply