ರಷ್ಯಾದ ತೈಲ ಡಿಪೋ ಮೇಲೆ ಯುಕ್ರೇನ್‌ ಡ್ರೋನ್‌ ದಾಳಿ!

masthmagaa.com:

ರಷ್ಯಾ-ಯುಕ್ರೇನ್‌ ಯುದ್ಧ 696ನೇ ದಿನಕ್ಕೆ ಕಾಲಿಟ್ಟಿದ್ದು, ಇದೀಗ ರಷ್ಯಾದ ಮೂರನೇ ಅತಿದೊಡ್ಡ ತೈಲ ಡಿಪೋ ಒಂದ್ರ ಮೇಲೆ ಯುಕ್ರೇನ್‌ ದಾಳಿ ನಡೆಸಿದೆ ಅಂತ ರಷ್ಯಾ ಆರೋಪಿಸಿದೆ. ರಷ್ಯಾದ ಬ್ರಿಯಾನ್ಸ್ಕ್‌ ಪ್ರದೇಶದಲ್ಲಿರೋ ಒಟ್ಟು 6,000 ಕ್ಯುಬಿಕ್‌ ಮೀಟರ್ಸ್‌ ಸಾಮರ್ಥ್ಯದ 4 ಆಯಿಲ್‌ ರಿಸರ್ವಾಯರ್‌ಗಳ ಮೇಲೆ ಈ ದಾಳಿ ನಡೆದಿದೆ. ರಷ್ಯಾ ಏರ್‌ ಡಿಫೆನ್ಸ್‌ ಈ ಡ್ರೋನ್‌ನ್ನ ಜಾಮ್‌ ಮಾಡಿತ್ತು. ಆದ್ರೂ ಅದ್ರ ಸ್ಫೋಟಕ ಪೇಲೋಡ್‌ಗಳು ಕೆಳಗೆ ಡ್ರಾಪ್‌ ಆಗಿ ತೈಲ ಡಿಪೋದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಸದ್ಯ ಯಾವ್ದೇ ರೀತಿ ಪ್ರಾಣ ಹಾನಿ ಉಂಟಾಗಿಲ್ಲ ಅಂತ ರಷ್ಯಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply