ರಷ್ಯಾಗೆ ಪೊಲೆಂಡ್‌ ಎಚ್ಚರಿಕೆ! ಗಡಿ ದಾಟಿ ಬಂತು ರಷ್ಯಾ ಕ್ಷಿಪಣಿಗಳು!

masthmagaa.com:

ಯುಕ್ರೇನ್‌ ಯುದ್ದದಲ್ಲಿ ದೊಡ್ಡ ಬೆಳವಣಿಗೆಯಾಗಿದೆ. ನ್ಯಾಟೋ ರಾಷ್ಟ್ರಗಳು ಹಾಗೂ ರಷ್ಯಾ ನಡುವೆ ಭಾರೀ ಉದ್ವಿಗ್ನತೆ ಎದುರಾಗಿದೆ. ಅದಕ್ಕೆ ಕಾರಣವಾಗಿರೋದು ರಷ್ಯಾದ ಮಿಸೈಲ್ ದಾಳಿ. ಮೊನ್ನೆ ರಷ್ಯಾದಲ್ಲಿ ಉಗ್ರ ದಾಳಿಯಾದ ಬೆನ್ನಲ್ಲೇ ಯುಕ್ರೇನ್‌ ಮೇಲಿನ ದಾಳಿಯನ್ನ ರಷ್ಯಾ ತೀವ್ರಗೊಳಿಸಿತ್ತು. ಒಂದೇ ಸಮನೆ ಯುಕ್ರೇನ್‌ ನಗರಗಳ ಮೇಲೆ ಕ್ಷಿಪಣಿ ಸುರಿಸಿತ್ತು. ಆದರೆ ಈ ರೀತಿ ದಾಳಿ ಮಾಡುವ ಸಂದರ್ಭದಲ್ಲಿ ಯುಕ್ರೇನ್‌ ಜೊತೆಗೆ ಪಕ್ಕದ NATO ರಾಷ್ಟ್ರ ಪೋಲೆಂಡ್‌ ಮೇಲೂ ರಷ್ಯಾ ಕ್ಷಿಪಣಿ ಹಾರಿಸಿದೆ. ಹಾಗಂತ ದಾಳಿ ಮಾಡಿಲ್ಲ. ಪೊಲೆಂಡ್‌ನ ಅಂದ್ರೆ ನ್ಯಾಟೋ ದೇಶದ ವಾಯುಗಡಿ ಪ್ರವೇಶ ಮಾಡಿ ಯುಕ್ರೇನ್‌ ಮೇಲೆ ದಾಳಿ ಮಾಡಿದೆ. ಇದು ನ್ಯಾಟೋ ಹಾಗೂ ರಷ್ಯಾ ನಡುವೆ ಉದ್ವಿಗ್ನತೆಗೆ ಕಾರಣವಾಗಿದೆ. ಈ ಬಗ್ಗೆ ರಿಯಾಕ್ಟ್‌ ಮಾಡಿರೋ ಪೊಲೆಂಡ್ ʻರಷ್ಯಾ ನಮ್ಮ ವಾಯುಪ್ರದೇಶದ ಉಲ್ಲಂಘನೆ ಮಾಡಿದೆ…ಯುಕ್ರೇನ್‌ನ ಲೀವ್‌ ಪ್ರದೇಶದ ಮೇಲೆ ದಾಳಿ ನಡೆಸುವಾಗ ರಷ್ಯಾ ಕ್ಷಿಪಣಿಗಳು ಪೋಲೆಂಡ್‌ ಬಾರ್ಡರ್‌ ಕ್ರಾಸ್‌ ಮಾಡಿವೆ. ಸುಮಾರು 39 ಸೆಕೆಂಡ್‌ಗಳ ಕಾಲ ಪೊಲೆಂಡ್‌ ಪ್ರದೇಶದಲ್ಲಿ ರಷ್ಯಾ ಕ್ಷಿಪಣಿಗಳು ಹಾರಿವೆ, ಈ ಕ್ಷಿಪಣಿಗಳನ್ನ ಪೋಲೆಂಡ್‌ ಸೇನೆಯ ರೇಡಾರ್‌ ಸಿಸ್ಟಮ್‌ಗಳು ಬಹಳ ಸೂಕ್ಷ್ಮವಾಗಿ ಮಾನಿಟರ್‌ ಮಾಡಿದೆ. ಈ ಮಿಸೈಲ್‌ಗಳು ಗಂಟೆಗೆ 800 ಕಿಮೀ ವೇಗದಲ್ಲಿ ಸಾಗಿ ಬರ್ತಿದ್ವು.. ನೆಲದಿಂದ ಸುಮಾರು 400 ಮೀಟರ್‌ ಎತ್ತರದಲ್ಲಿ ಹಾರ್ತಿದ್ವು. ಪೋಲೆಂಡ್‌ ಗಡಿ ದಾಟಿ ಸುಮಾರು 2 ಕಿಮೀ ಮುಂದೆ ಬಂದಿದ್ವುʼ ಅಂತ ಪೋಲೆಂಡ್‌ ಹೇಳ್ಕೊಂಡಿದೆ. ಅಷ್ಟೇ ಅಲ್ಲ ರಷ್ಯಾದಿಂದ ಕ್ಷಿಪಣಿ ಹಾರಿ ಬಂದ ಕೂಡಲೇ ಪೊಲೆಂಡ್‌ ಮತ್ತು ಅದರ ಮಿತ್ರ ಪಡೆಗಳು ಅಂದ್ರೆ ನ್ಯಾಟೋ ಪಡೆಗಳು ಸನ್ನದ್ದವಾಗಿದ್ವು.. ಎಲ್ಲ ರೀತಿಯಲ್ಲೂ ರೆಡಿಯಾಗಿದ್ವು ಅಂತ ಹೇಳಿದ್ದಾರೆ. ಈ ಮೂಲಕ ಚೂರು ಯಾಮಾರಿದ್ರೂ ರಷ್ಯಾ ಹಾಗೂ ನ್ಯಾಟೋ ದೇಶಗಳ ನಡುವೆ ಯುದ್ದವೇ ಆಗೋಗ್ತಿತ್ತು ಅನ್ನೋ ಅರ್ಥದಲ್ಲಿ ಪೊಲೆಂಡ್‌ ಹೇಳಿದೆ. ಇತ್ತ ಈ ಘಟನೆಗೆ ಸ್ಪಷ್ಟನೆ ಕೊಡಿ ಅಂತ ಪೋಲೆಂಡ್‌ನ ವಿದೇಶಾಂಗ ಸಚಿವಾಲಯದ ವಕ್ತಾರ ಪಾವೆಲ್‌ ವ್ರೊನ್ಸ್ಕಿ (Pawel Wronski) ರಷ್ಯಾವನ್ನ ತರಾಟೆಗೆ ತೆಗೆದ್ಕೊಂಡಿದ್ದಾರೆ. ಅಷ್ಟೇ ಅಲ್ಲ ʻಪ್ರಮುಖವಾಗಿ ಯುಕ್ರೇನ್ ಮೇಲೆ ದಾಳಿ ನಡೆಸೋದನ್ನ ಇಲ್ಲಿಗೆ ನಿಲ್ಲಿಸಿ…ನಿಮ್ಮ ದೇಶದ ಆಂತರಿಕ ಸಮಸ್ಯೆಗಳ ಬಗ್ಗೆ ಫೋಕಸ್‌ ಮಾಡಿ ಅಂತ ರಷ್ಯಾ ಹತ್ರ ಕೇಳ್ಕೊಳ್ತೀವಿ. ಇನ್ನು ರಷ್ಯಾ ಕ್ಷಿಪಣಿಗಳು ಪೋಲೆಂಡ್‌ನ್ನ ಟಾರ್ಗೆಟ್‌ ಮಾಡೋಕೆ ಹಾರಿ ಬಂದಿತ್ತು ಅನ್ನೋ ಸೂಚನೆ ಇದ್ರೆ…ಅವುಗಳನ್ನ ಅಲ್ಲೇ ಹೊಡೆದು ಉರುಳಿಸ್ತಿದ್ದೀವಿ…ತಕ್ಕ ಪ್ರತಿಕ್ರಿಯೆ ಕೊಡ್ತೀವಿ ಅಂತ ಎಚ್ಚರಿಕೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply