ಜಿ20 ಸಭೆಯ ನಿರ್ಣಯವನ್ನ ತಡೆಹಿಡಿತಿವಿ ಎಂದ ರಷ್ಯಾ! ಯಾಕೆ?

masthmagaa.com:

ಭಾರತದಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಭಾಗವಹಿಸೋಕೆ ಸಾಧ್ಯವಾಗ್ತಿಲ್ಲ ಅಂತ ರಷ್ಯಾ ಅಧ್ಯಕ್ಷ ವ್ಲಾಡಮಿರ್‌ ಪುಟಿನ್‌ ಹೇಳಿದ್ರು. ಇದೀಗ ಜಿ20 ಸಭೆಯಲ್ಲಿ ನಮ್ಮ ಅಭಿಪ್ರಾಯಗಳನ್ನ ಪರಿಗಣಿಸದೇ ಹೋದ್ರೆ ಸಭೆಯ ಅಂತಿಮ ನಿರ್ಣಯವನ್ನ ತಡೆಹಿಡಿಯಲಾಗುತ್ತದೆ ಅಂತ ರಷ್ಯಾ ಎಚ್ಚರಿಸಿದೆ. ಜಿ20 ಪೂರ್ವ ಸಭೆಯಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳು ಯುಕ್ರೇನ್‌ ಯುದ್ಧವನ್ನ ಪ್ರಸ್ತಾಪ ಮಾಡಿದ್ದವು. ಈ ವಿಚಾರ ನಮಗೆ ಈಗಾಗಲೇ ಮುಗಿದು ಹೋಗಿರುವ ಸಂಗತಿ ಅಂತ ಸ್ಪಷ್ಟಪಡಿಸಿದ್ದೇವೆ ಅಂತ ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೋವ್‌ ಹೇಳಿದ್ದಾರೆ. ಇದೇ ವೇಳೆ ಪಾಶ್ಚಿಮಾತ್ಯ ರಾಷ್ಟ್ರಗಳು ತಮ್ಮ ಅಜೆಂಡಾಗಳನ್ನ ಮುಂದಿಟ್ಟುಕೊಂಡು ಜಾಗತಿಕ ಸಂಸ್ಥೆಗಳನ್ನ ದುರ್ಬಗೊಳಿಸುತ್ತಿವೆ. ಹೀಗಾಗಿ ಜಿ20 ಸಭೆಯಲ್ಲಿ ನಮ್ಮ ಸ್ಥಾನ ಹಾಗೂ ಅಭಿಪ್ರಾಯಗಳನ್ನ ಪರಿಗಣಿಸದೇ ಇದ್ರೆ ಫೈನಲ್‌ ಡಿಕ್ಲೆರೇಶನ್‌ನ್ನ ರಿಜೆಕ್ಟ್‌ ಮಾಡ್ಬೇಕಾಗುತ್ತೆ ಅಂತ ಲಾವ್ರೋವ್‌ ಹೇಳಿದ್ದಾರೆ. ಅಂದ್ಹಾಗೆ ಈ ಸಭೆಯಲ್ಲಿ ಪುಟಿನ್‌ ಬದ್ಲಾಗಿ ಲಾವ್ರೋವ್‌ ಭಾಗವಹಿಸಲಿದ್ದಾರೆ. ಇತ್ತ ಜಿ20 ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಜಿನ್‌ಪಿಂಗ್‌ ಹಾಗೂ ಪುಟಿನ್‌ ಅವ್ರ ಅನುಪಸ್ಥಿತಿಯಲ್ಲೂ ಭಾರತದಲ್ಲಿ ನಡೆಯಲಿರುವ ಸಭೆ ತುಂಬಾನೆ ಮಹತ್ವದ್ದಾಗಿದೆ ಅಂತ ಜರ್ಮನಿ ಚಾನ್ಸಲರ್‌ ಓಲಾಫ್‌ ಸ್ಕೋಲ್ಜ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply