ಸೆರ್ಗಿ ಲಾವ್ರೋವ್‌ರ ಕ್ಷಮೆಯಾಚಿಸಿದ ಭಾರತದಲ್ಲಿರುವ ರಷ್ಯಾ ರಾಯಭಾರಿ! ಯಾಕೆ?

masthmagaa.com:

ಕುತೂಹಲಕಾರಿ ಬೆಳವಣಿಗೆಯಲ್ಲಿ ರಷ್ಯಾ ವಿದೇಶಾಂಗ ಸಚಿವ ಸೆರ್ಗಿ ಲಾವ್ರೋವ್‌ ಅವ್ರ ಬಗ್ಗೆ ಹಗುರವಾಗಿ ಮಾತಾಡಿರುವ ಹಿನ್ನೆಲೆಯಲ್ಲಿ ಭಾರತದಲ್ಲಿರುವ ರಷ್ಯಾ ರಾಯಭಾರಿ ಡೆನಿಸ್‌ ಅಲಿಪೋವ್‌ ಕ್ಷಮೆ ಕೇಳಿದ್ದಾರೆ. ಭಾರತದಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಲಾವ್ರೋವ್‌ ಭಾಗವಹಿಸುತ್ತಿರುವ ಕುರಿತು ಮಾತಾಡುವಾಗ, ಲಾವ್ರೋವ್‌ ಭಾರತಕ್ಕೆ ಬರ್ತಿದ್ದಾರೆ. ಅವ್ರಿಗೆ ಮದುವೆಯಾಗಿದೆ. ಆದ್ರೆ ಲಾವ್ರೋವ್‌ ಒಬ್ಬ ವುಮನೈಸರ್‌ ಅಥ್ವಾ ಸ್ರ್ತೀಲೋಲ ಅಂತ ಕರೆದಿದ್ದಾರೆ. ಈ ಹೇಳಿಕೆ ಟೀಕೆಗೆ ಗುರಿಯಾಗ್ತಿದ್ದಂತೆ ಅಲಿಪೋವ್‌ ಕ್ಷಮೆಯಾಚಿಸಿದ್ದಾರೆ. ಜೊತೆಗೆ ಸೆರ್ಗಿ ಲಾವ್ರೋವ್‌ ಅವ್ರು ಮಹಿಳೆಯರಿಗೆ ಫೇವರಿಟ್‌ ಹಾಗೂ ಜನಪ್ರಿಯ ವ್ಯಕ್ತಿ ಅಂತ ಹೇಳೋದು ನನ್ನ ಉದ್ಧೇಶವಾಗಿತ್ತು ಅಂತ ಅಲಿಪೋವ್‌ ಸ್ಪಷ್ಟನೆ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply