ಡಾನ್‌ಬಾಸ್‌ ಕಡೆಗೆ ರಷ್ಯನ್‌ ಪಡೆ ; ಅಮೆರಿಕಾ ಹೇಳಿದ್ದೇನು ?

masthmagaa.com:

ಕಿಯೇವ್‌ನಿಂದ ಪಲಾಯನ ಮಾಡಿರೋ ರಷ್ಯನ್‌ ಸೈನಿಕರು ಯುಕ್ರೇನ್‌ನ ಪೂರ್ವಭಾಗದ ಕಡೆ ಫೋಕಸ್‌ ಮಾಡ್ಬೋದು ಅಂತ ಯುಕ್ರೇನ್‌ ಇತ್ತೀಚಗೆ ಹೇಳಿತ್ತು. ಅದಕ್ಕೆ ಪುಷ್ಠಿ ನೀಡುವಂತೆ ಈಗ ಯುಕ್ರೇನ್‌ ಪೂರ್ವಭಾಗವಾದ ಡಾನೆಂಸ್ಕ್‌ ಮತ್ತು ಲುಹಾನ್ಸ್‌ ಪ್ರದೇಶಗಳಲ್ಲಿ ರಷ್ಯಾ ಸೇನಾ ಜಮಾವಣೆಯನ್ನ ಜಾಸ್ತಿ ಮಾಡ್ತಿದೆ ಅನ್ನೋ ವಿಚಾರ ಸ್ಯಾಟ್‌ ಲೈಟ್‌ ಚಿತ್ರಗಳ ಮೂಲಕ ಬಹಿರಂಗವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರುವ ಅಮೆರಿಕಾದ ಉನ್ನತ ಅಧಿಕಾರಿಯೊಬ್ರು ಯುಕ್ರೇನ್‌ನ ಪೂರ್ವ ಭಾಗದಲ್ಲಿ ರಷ್ಯಾ ತನ್ನ ಸೇನೆಯನ್ನ ಮತ್ತೆ ನಿಯೋಜನೆ ಮಾಡ್ತಿದೆ. ಡಾನ್‌ಬಸ್‌ ಪ್ರದೇಶದಲ್ಲಿ ದೊಡ್ಡ ಮಟ್ಟದ ಕದನಕ್ಕೆ ಅವರು ಸಿದ್ದವಾಗ್ತಿದ್ದಾರೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply