ಯುಕ್ರೇನ್‌ ಮುಂದೆ ಸರೆಂಡರ್‌ ಆದ ರಷ್ಯಾ ಸೇನಾ ಪಡೆಗಳು! ಸೋಲೊಪ್ಪಿಕೊಳ್ತಾ ರಾಷ್ಯಾ?

masthmagaa.com:

ನಿರಂತರವಾಗಿ ಯುಕ್ರೇನ್‌ ಯುದ್ಧದಲ್ಲಿ ಭಾಗಿಯಾಗಿರೊ ರಷ್ಯಾದ ಯೋಧರು ಯುಕ್ರೇನ್‌ಗೆ ಸರೆಂಡರ್‌ ಆಗ್ತಿದಾರೆ ಅಂತ ಯುಕ್ರೇನ್‌ನ ಗುಪ್ತಚರ ಇಲಾಖೆ ಹೇಳಿದೆ. ರಷ್ಯಾ ಸೈನಿಕರು ತಮ್ಮ ಜೀವ ಉಳಿಸಿಕೊಳ್ಳುವ ಸಲುವಾಗಿ ಯುಕ್ರೇನ್‌ ಮುಂದೆ ಶರಣಾಗತರಾಗ್ತಿದ್ದಾರೆ. ಜೊತೆಗೆ ಯುದ್ಧ ಮೈದಾನದಲ್ಲೇ ಹಲವಾರು ಸೈನಿಕರನ್ನ ಸರೆಹಿಡಿಯಲಾಗ್ತಿದೆ ಅಂತ ಯುಕ್ರೇನ್‌ ಗುಪ್ತಚರ ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಯುದ್ಧದಲ್ಲಿ ರಷ್ಯಾದ ಸೈನಿಕರಿಗೆ ಸಾವು ಅಥ್ವಾ ಸೆರೆಯಾಗೋದು ಬಿಟ್ರೆ ಯಾವುದೇ ಆಯ್ಕೆಯಿಲ್ಲ ಅಂತ ಯುಕ್ರೇನ್‌ ರಕ್ಷಣಾ ಸಚಿವಾಲಯ ಹೇಳಿದೆ. ಅಷ್ಟೆ ಅಲ್ದೆ 3 ಸಾವಿರ ರಷ್ಯಾ ಸೈನಿಕರು ಸರೆಂಡರ್‌ ಆಗ್ತೀವಿ ಅಂತ ಮನವಿಮಾಡಿಕೊಂಡಿದ್ದಾರೆ. ಇದು ಕಳೆದ ತಿಂಗಳಿಗೆ ಹೋಲಿಸಿದ್ರೆ ಡಬಲ್‌ ಆಗಿದೆ ಅಂತ I Want to Live ಹೆಲ್ಪ್‌ಲೈನ್‌ನ ವಕ್ತಾರ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply