ಅಮೆರಿಕ-ಯುಕ್ರೇನ್‌ ಮೇಲೆ ಎಗರಿ ಬೀಳ್ತಾರಾ ರಷ್ಯಾದ ಸೈಬರ್‌ ಕಳ್ಳರು! ಮೈಕ್ರೋಸಾಪ್ಟ್‌ ಹೇಳಿದ್ದೇನು?

masthmagaa.com:

ಯುಕ್ರೇನ್‌ ವಿರುದ್ದ ರಷ್ಯಾದ ಸೈಬರ್‌ ಪಡೆ ಮತ್ತೊಂದು ಸುತ್ತಿನ ಹ್ಯಾಕಿಂಗ್‌ ಮಾಡೋಕೆ ತಯಾರಾಗಿದೆ ಅಂತ ಮೈಕ್ರೋಸಾಪ್ಟ್‌ ಹೇಳಿದೆ. ಮೈಕ್ರೋಸಾಪ್ಟ್‌ನ ಸೆಕ್ಯೂರಿಟಿ ರಿಸರ್ಚ್‌ ಅಂಡ್‌ ಅನಾಲಿಸಿಸ್‌ ಟೀಮ್‌ ಇದರ ಬಗ್ಗೆ ಸಂಶೋಧನೆ ಮಾಡ್ತಾಯಿದೆ. 2023ರ ಜನವರಿಯಿಂದ ಇದುವರೆಗೂ ರಷ್ಯಾದ ಸೈಬರ್‌ ಕಳ್ಳರು ಯುಕ್ರೇನ್‌ ಹಾಗೂ ಅವರ ಮಿತ್ರರ ಮೇಲೆ ಅಂದ್ರೆ ಅಮೆರಿಕ ಹಾಗೂ ಪಾಶ್ಚಿಮಾತ್ಯರ ಮೇಲೆ ದಾಳಿ ಮಾಡೋದಕ್ಕೆ ಪ್ರಿಪೇರ್‌ ಆಗ್ತಿದ್ದಾರೆ. ಮಿಲಿಟರಿ ಹಾಗೂ ಸಿವಿಲ್‌ ಸಂಸ್ಥೆಗಳ ಮೇಲೆ ಈ ಸೈಬರ್‌ ದಾಳಿ ನಡೆಯೋ ಸಾಧ್ಯತೆ ಇದೆ ಅಂತ ಮೈಕ್ರೋಸಾಪ್ಟ್‌ ವರದಿ ತಿಳಿಸಿದೆ. ಆದ್ರೆ ರಷ್ಯಾದಿಂದ ಈ ಆರೋಪಕ್ಕೆ ಸಂಬಂಧಪಟ್ಟಂತೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

-masthmagaa.com

Contact Us for Advertisement

Leave a Reply