ರಷ್ಯಾದಿಂದ ಯುಕ್ರೇನ್‌ ಮೇಲೆ ಮಿಸೈಲ್‌ ದಾಳಿ: ಕನಿಷ್ಠ 5 ಸಾವು!

masthmagaa.com:

ರಷ್ಯಾ ಮಿಸೈಲ್‌ ದಾಳಿಗೆ ಕನಿಷ್ಠ 5ಜನ ಸಾವನ್ನಪ್ಪಿರೊ ಘಟನೆ ಯುಕ್ರೇನ್‌ನ ನೈರುತ್ಯ ಕರಾವಳಿ ತೀರದ ಒಡೆಸಾ ನಗರದಲ್ಲಿ ನಡೆದಿದೆ. ಈ ಬಗ್ಗೆ ಸ್ವತಃ ಮಾಹಿತಿ ನೀಡಿರೋ ಯುಕ್ರೇನ್‌ ಅಧಿಕಾರಿಗಳು ಘಟನೆಯಲ್ಲಿ 32 ಜನ ಗಾಯಗೊಂಡಿದ್ದಾರೆ ಅಂತೇಳಿದ್ದಾರೆ. ಇನ್ನು ದಾಳಿ ವೇಳೆ ಪ್ರಮುಖವಾಗಿ ಹ್ಯಾರಿ ಪಾಟರ್‌ ಕಾಸ್ಟಲ್‌ ಚಿತ್ರದ ಕೋಟೆಯನ್ನ ಹೋಲುವ ಶಿಕ್ಷಣ ಸಂಸ್ಥೆಯ ಕಟ್ಟಡ ಸೇರಿದಂತೆ ಹಲವು ಕಟ್ಟಡಗಳು ಧ್ವಂಸವಾಗಿವೆ. ಕ್ಲಸ್ಟರ್‌ ಸಿಡಿತಲೆಗಳನ್ನ ಹೊತ್ಯೊಯ್ಯೊ ಇಸ್ಕಾಂಡರ್‌ ಎಮ್‌ ಬ್ಯಾಲಸ್ಟಿಕ್‌ ಮಿಸೈಲ್‌ನಿಂದ ದಾಳಿ ನಡೆದಿದೆ ಅಂತ ಯುಕ್ರೇನ್‌ ಹೇಳ್ಕೊಂಡಿದೆ.

-masthmagaa.com

Contact Us for Advertisement

Leave a Reply