ಪ್ರಾರ್ಥನೆ ಮಾಡೋಕೆ ಒಪ್ಪದ ಪಾದ್ರಿಯನ್ನ ಹೊರದಬ್ಬಿದ ರಷ್ಯಾ! ಯಾಕೆ?

masthmagaa.com:

ರಷ್ಯಾ ಅಧ್ಯಕ್ಷ ಪುಟಿನ್‌ರನ್ನ ಎದುರು ಹಾಕಿಕೊಂಡವ್ರಿಗೆ ಉಳಿಗಾಲವಿಲ್ಲ ಅನ್ನೋದಕ್ಕೆ ಇನ್ನೊಂದು ಎಕ್ಸಾಂಪಲ್‌ ಸಿಕ್ಕಿದೆ. ಯುಕ್ರೇನ್‌ ವಿರುದ್ಧದ ಯುದ್ಧದಲ್ಲಿ ರಷ್ಯಾಗೆ ಜಯವಾಗ್ಲಿ ಅಂತ ಪ್ರಾರ್ಥನೆ ಮಾಡಿ, ಪ್ರೇಯರ್‌ ಹೇಳಿ ಅಂತ ಅಲ್ಲಿನ ಆರ್ಥೋಡಾಕ್ಸ್‌ ಚರ್ಚಿನ ಪಾದ್ರಿ ಹತ್ರ ಕೇಳಲಾಗಿತ್ತು. ಇದಕ್ಕೆ ಒಪ್ಪದ ಪಾದ್ರಿಯನ್ನ ಇದೀಗ ಕರ್ತವ್ಯದಿಂದ ಹೊರಹಾಕೋಕೆ ರಷ್ಯಾದ ಚರ್ಚ್‌ ಕೋರ್ಟ್‌ ಆದೇಶ ನೀಡಿದೆ. ʻAleksiy Uminsky ಅನ್ನೋ ಪಾದ್ರಿ ರಷ್ಯಾಗೋಸ್ಕರ ಪ್ರೇಯರ್‌ನ್ನ ಹೇಳ್ದೇ, ತಾವು ಮಾಡಿದ್ದ ಪ್ರಮಾಣವನ್ನ ಮುರಿದಿದ್ದಾರೆʼ ಅಂತ ಕೋರ್ಟ್‌ ಹೇಳಿದೆ.

-masthmagaa.com

Contact Us for Advertisement

Leave a Reply