ಯುಕ್ರೇನ್‌ಗೆ ವಿಶ್ವಸಂಸ್ಥೆ ಮುಖ್ಯಸ್ಥ ಭೇಟಿ: ಸ್ವಲ್ವದರಲ್ಲೇ ಬಚಾವಾದ ಗುಟರೆಸ್‌!

masthmagaa.com:

ಯುಕ್ರೇನ್‌ ಯುದ್ಧ ಮೂರನೇ ತಿಂಗಳಿಗೆ ಕಾಲಿಟಿದ್ದು ಕೊನೆಗೊಳ್ಳೋ ಯಾವುದೇ ಲಕ್ಷಣ ಕಾಣ್ತಾ ಇಲ್ಲ. ಬ್ರಿಟನ್‌ ಫಾರೆನ್ ಸೆಕ್ರಟರಿ ಅಂತೂ ಈ ಯುದ್ಧ 10 ವರ್ಷಗಳ ಕಾಲ ನಡೆಯುತ್ತೆ ಅಂತ ಹೇಳಿದ್ದಾರೆ. 10 ವರ್ಷ ನಡೆಯುತ್ತೋ ಇಲ್ವೋ ಆದ್ರೆ ಸದ್ಯಕ್ಕಂತೂ ಎಂಡ್‌ ಆಗ್ತಿಲ್ಲ. ವಿಶ್ವಸಂಸ್ಥೆ ಅಧ್ಯಕ್ಷ ಆಂಟೊನಿಯೊ ಗುಟೆರೆಸ್‌ ಯುಕ್ರೇನ್‌ಗೆ ಭೇಟಿ ನೀಡಿದ್ರು ಕೂಡ ರಷ್ಯಾ ದಾಳಿಯನ್ನ ನಿಲ್ಸಿಲ್ಲ. ಅವ್ರು ಇರೋ ಜಾಗಕ್ಕೆ ಸಮೀಪವೇ ರಷ್ಯಾದ ಮಿಸೈಲ್‌ ಒಂದು ಬಂದು ಬಿದ್ದಿದೆ. ಮಧ್ಯ ಕಿಯೆವ್‌ನ ಬಳಿ ಈ ರಾಕೆಟ್‌ ದಾಳಿಯಾಗಿದ್ದು, ವಿ‍ಶ್ವಸಂಸ್ಥೆ ನಿಯೋಗವನ್ನೇ ಬೆಚ್ಚಿಬೀಳಿಸಿದೆ. ಘಟನೆಯಲ್ಲಿ 10 ಜನ ಗಾಯಗೊಂಡಿದ್ದಾರೆ ಅಂತ ಹೇಳಲಾಗ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ವಿಶ್ವಸಂಸ್ಥೆಯ ಅಧಿಕಾರಿಯೊಬ್ರು, ಇದು ವಾರ್‌ಜೋನ್‌ ಅಂತ ಗೊತ್ತು ಆದ್ರೆ ನಮಗೆ ಇಷ್ಟು ಹತ್ತಿರದಲ್ಲೇ ಈ ದಾಳಿಯಾಗಿರೋದು ಆಘಾತಕಾರಿ ಅಂತ ಹೇಳಿದ್ದಾರೆ. ಯುಕ್ರೇನ್‌ ಅ‍ಧ್ಯಕ್ಷ ಜೆಲನ್‌ಸ್ಕಿ ಮತ್ತು ವಿಶ್ವಸಂಸ್ಥೆ ಮುಖ್ಯಸ್ಥ ಗುಟರೆಸ್‌ ಜಂಟಿ ಸುದ್ಧಿಗೋಷ್ಠಿ ನಡೆಸಿದ ಕೆಲವೇ ಹೊತ್ತಲ್ಲಿ ಈ ಘಟನೆ ಆಗಿದೆ. ಇದಕ್ಕೆ ಪ್ರತಿಕ್ರಿಯಿಸಿರೋ ಜೆಲನ್‌ಸ್ಕಿ, ನಮ್ಮ ಭೇಟಿ ಆದ ಸ್ವಲ್ಪದರಲ್ಲೇ ರಷ್ಯಾ ಕಿಯೆವ್‌ ಮೇಲೆ ರಾಕೆಟ್‌ ದಾಳಿ ಮಾಡಿದೆ. ಇದು ರಷ್ಯಾ ವಿಶ್ವಸಂಸ್ಥೆಗೆ ಅಪಮಾನ ಮಾಡ್ತಾ ಇರೋದನ್ನ ತೋರ್ಸುತ್ತೆ ಅಂತ ಹೇಳಿದ್ದಾರೆ. ಇನ್ನು ಯುಕ್ರೇನ್‌ನ ಫಾರೆನ್‌ ಮಿನಿಸ್ಟರ್‌ ಡಿಮಿಟ್ರಿ ಕುಲೆಬಾ ಇದನ್ನ ಹೇಯ ಕೃತ್ಯ ಅಂತ ಕರೆದ್ರೆ, ಡಿಫೆನ್ಸ್‌ ಮಿನಿಸ್ಟರ್‌ ಒಲೆಕ್ಸಿಯ ರೆಜ್ನಿಕೋವ್‌, ಇದು ವಿ‍ಶ್ವಸಂಸ್ಥೆ ಅಧ್ಯಕ್ಷರ ಭದ್ರತೆಯ ಮೇಲೆ ನಡೆಸಿದ ದಾಳಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply