ಕಪ್ಪು ಸಮುದ್ರದಲ್ಲಿ ಮುಳುಗಿತು ರಷ್ಯಾ ಹಡಗು! ಪ್ರತಿಕಾರ ತೀರಿಸಿಕೊಳ್ತಾರಾ ಪುಟಿನ್​?

masthmagga.com:

ರಷ್ಯಾ ಯುಕ್ರೇನ್‌ ಸಂಘರ್ಷ ಮತ್ತಷ್ಟು ಭೀಕರ ಆಗ್ತಾ ಇದ್ದು ನಿನ್ನೆಯಷ್ಟೇ ಯುಕ್ರೇನ್‌ ಕ್ಷಿಪಣಿ ಮೂಲಕ ದಾಳಿ ಮಾಡಿದ್ದೇವೆ ಎನ್ನಲಾದ ರಷ್ಯಾದ ಯುದ್ದ ನೌಕೆ ಮುಳುಗಿದೆ ಅಂತ ವರದಿಯಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ರಷ್ಯಾ ತನ್ನ ಮೊಸ್ಕವಾ ಹಡಗು ಕಪ್ಪು ಸಮುದ್ರದದಲ್ಲಿ ಮುಳುಗಿದೆ ಅಂತ ಹೇಳಿದೆ. ಆದ್ರೆ ಅದು ಯುಕ್ರೇನ್‌ ದಾಳಿಯಿಂದ ಆಗಿದೆ ಅನ್ನೋದನ್ನ ರಷ್ಯಾ ಒಪ್ಪಿಕೊಂಡಿಲ್ಲ. ಬದಲಾಗಿ ವಾತಾವರಣ ವ್ಯತ್ಯಯದಿಂದ ಹಡಗಿನಲ್ಲಿದ್ದ ಆಯುಧಗಳು ಸ್ಫೋಟಗೊಂಡು ಈ ರೀತಿ ಆಗೋಗಿದೆ ಅಂತ ಹೇಳಿದೆ. ಇನ್ನು ಘಟನೆ ಬಗ್ಗೆ ಪ್ರತಿಕ್ರಿಯಿಸಿರೋ ಅಮೆರಿಕ, ಕಪ್ಪುಸಮುದ್ರದಲ್ಲಿ ಬೀಡು ಬಿಟ್ಟಿರೋ ರಷ್ಯಾ ನೌಕಾಪಡೆಗೆ ಯುಕ್ರೇನ್‌ ನೀಡಿರೋ ದೊಡ್ಡ ಪೆಟ್ಟು ಇದು ಅಂತ ಬಣ್ಣಿಸಿದೆ. ಇದರ ಬೆನ್ನಲ್ಲೇ ಯುಕ್ರೇನ್‌ ರಾಜಧಾನಿ ಕಿಯವ್‌ನಲ್ಲಿ ಭಾರಿ ಪ್ರಮಾಣದ ಸ್ಪೋಟ ನಡೆದಿದೆ ಅಂತ ವರದಿಯಾಗಿದೆ. ಹಡಗಿನ ಮೇಲೆ ದಾಳಿ ಮಾಡಿರೋದಕ್ಕೆ ಪ್ರತಿಕಾರವಾಗಿ ರಷ್ಯಾ ಈ ರೀತಿ ಮಾಡಿದ್ಯಾ ಅನ್ನೋ ಅನುಮಾನ ಮೂಡಿದೆ.

-masthmagaa.com

Contact Us for Advertisement

Leave a Reply