ಮಾರ್ಕೆಟ್‌ನಲ್ಲಿ ನಿರ್ದಿಷ್ಟ ಬೆಲೆ ಮೆಂಟೇನ್‌ ಮಾಡಲು ತೈಲ ಉತ್ಪಾದನೆ ಕಟ್‌ ಮಾಡ್ತೀವಿ: ಪುಟಿನ್‌

masthmagaa.com:

ಜಾಗತಿಕ ತೈಲ ಮಾರ್ಕೆಟ್‌ನಲ್ಲಿ ನಿರ್ಧಿಷ್ಟ ಬೆಲೆ ಮಟ್ಟವನ್ನ ಮೆಂಟೇನ್‌ ಮಾಡ್ಬೇಕು ಅಂದ್ರೆ ತೈಲ ಉತ್ಪಾದನೆಯನ್ನ ಕಡಿತ ಮಾಡುವ ಅಗತ್ಯವಿದೆ ಅಂತ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹೇಳಿದ್ದಾರೆ. ತೈಲ ಬೆಲೆಯನ್ನ ಬ್ಯಾಲೆನ್ಸ್‌ ಮಾಡಲು ರಷ್ಯಾ ತನ್ನ ತೈಲ ಉತ್ಪಾದನೆಯನ್ನ ಕಡಿತಗೊಳಿಸಿದ್ರೆ ಜಾಗತಿಕ ತೈಲ ಮಾರುಕಟ್ಟೆ ಒಟ್ಟಾರೆಯಾಗಿ ಸ್ಥಿರವಾಗಲಿದೆ. ಹೀಗಾಗಿ ಅಗತ್ಯ ಮಟ್ಟದ ತೈಲ ಉತ್ಪಾದನೆಯನ್ನ ಕಡಿತಗೊಳಿಸಲಾಗುತ್ತೆ ಅಂತ ಪುಟಿನ್‌ ಹೇಳಿದ್ದಾರೆ. ಜೊತೆಗೆ ನಮ್ಮ ಈ ತೈಲ ಉತ್ಪಾದನಾ ಕಡಿತ ಹಾಗೂ ವಿಶ್ವ ಮಾರುಕಟ್ಟೆಯಲ್ಲಿ ಒಂದು ನಿರ್ದಿಷ್ಟ ತೈಲ ಬೆಲೆಯನ್ನ ಮೆಂಟೇನ್‌ ಮಾಡಲು ಬೇಕಾದ ಕ್ರಮಗಳನ್ನ ತೆಗೆದುಕೊಳ್ಳುವ ಮುನ್ನ ಒಪೆಕ್‌+ಪಾರ್ಟನರ್ಸ್‌ ಜೊತೆ ಮಾತುಕತೆ ನಡೆಸಲಾಗುತ್ತೆ ಅಂತ ಪುಟಿನ್‌ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಮೆರಿಕ ಹಾಗೂ ಯುರೋಪ್‌ ರಾಷ್ಟ್ರಗಳು, ರಷ್ಯಾ-ಯುಕ್ರೇನ್‌ ಯದ್ಧದಲ್ಲಿ ಪಾಶ್ಚಿಮಾತ್ಯ ದೇಶಗಳು ಪಾಲ್ಗೊಳ್ಳುವಂತೆ ಮಾಡಲು, ಇಂಧನ ಶಕ್ತಿಯನ್ನ ಒಂದು ಶಸ್ತ್ರದಂತೆ ರಷ್ಯಾ ಬಳಿಸಿಕೊಳ್ತಿದೆ ಅಂತ ಆರೋಪಿಸಿದ್ದಾರೆ. ಇತ್ತ ಹೈಪರ್‌ಸಾನಿಕ್‌ ಮಿಸೈಲ್‌ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಕೆಲಸ ಮಾಡಿದ್ದ ರಷ್ಯಾದ ವಿಜ್ಞಾನಿಗಳು ಅತ್ಯಂತ ಗಂಭೀರ ಆರೋಪಗಳನ್ನ ಫೇಸ್‌ ಮಾಡ್ತಿದ್ದಾರೆ ಅಂತ ಕ್ರೆಮ್ಲಿನ್‌ ಹೇಳಿದೆ. ರಷ್ಯಾದ ಅಧಿಕಾರಿಗಳು ನಡೆಸಿರುವ ದೇಶದ್ರೋಹ ಕೇಸ್‌ಗೆ ಸಂಬಂಧಿಸಿದ ತನಿಖೆಯಲ್ಲಿ ಈ ವಿಚಾರ ಬಹಿರಂಗಗೊಂಡಿದೆ. ಈ ಮೂವರು ವಿಜ್ಞಾನಿಗಳು ಹೈಪರ್‌ಸಾನಿಕ್‌ ಮಿಸೈಲ್‌ಗೆ ಸಂಬಂಧಿಸಿದ ರಹಸ್ಯ ಮಾಹಿತಿಯನ್ನ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಶೇರ್‌ ಮಾಡಿದ್ದಾರೆ ಅಂತ ಆರೋಪಿಸಲಾಗಿದೆ. ಇದನ್ನ ವಿರೋಧಿಸಿ ವಿಜ್ಞಾನಿಗಳ ತಂಡ ಓಪನ್‌ ಲೆಟರ್‌ ಬರೆದಿದ್ದು, ತಾವು ನಿರಪರಾಧಿಗಳು ಅಂತ ಪ್ರತಿಭಟಿಸಿದ್ದಾರೆ. ಆದ್ರೆ ಇದು ರಷ್ಯಾದ ಭದ್ರತಾ ವಿಚಾರವಾಗಿರುವುದ್ರಿಂದ ತನಿಖಾ ಅಧಿಕಾರಿಗಳ ಅನುಮಾನವನ್ನ ನೆಗ್ಲೆಕ್ಟ್‌ ಮಾಡಲು ಸಾಧ್ಯವಿಲ್ಲ ಅಂತ ಕ್ರೆಮ್ಲಿನ್‌ ವಕ್ತಾರ ಡಿಮಿಟ್ರಿ ಪೆಸ್ಕೋವ್‌ ಹೇಳಿದ್ದಾರೆ. ಇನ್ನೊಂದ್‌ ಕಡೆ ರಷ್ಯಾ ಹಾಗೂ ಬೆಲಾರುಸ್‌ ಗಡಿಯ ಒಂದಷ್ಟು ಕಡೆಗಳಲ್ಲಿ ಗಡಿ ನಿಯಂತ್ರಣಗಳನ್ನ ರಿಸ್ಟೋರ್‌ ಮಾಡಲಾಗಿದೆ ಅಂತ ಬೆಲಾರುಸ್‌ ವಿದೇಶಾಂಗ ಸಚಿವ ಸೆರ್ಗೆ ಅಲೆನಿಕ್‌ ಹೇಳಿದ್ದಾರೆ. ಕಳೆದ 30 ವರ್ಷಗಳ ಬಳಿಕ ಮೊದಲ ಬಾರಿಗೆ ಉಭಯ ದೇಶಗಳ ಗಡಿಗಳಲ್ಲಿ ತಪಾಸಣೆ ನಡೆಸಲಾಗುತ್ತಿದ್ದು, ಬೆಲಾರುಸ್‌ಗೆ ಇತರ ದೇಶದ ಪ್ರಜೆಗಳು ಬರದಂತೆ ತಡಯಲು ಗಡಿ ನಿಯಂತ್ರಣವನ್ನ ಪುನಃ ಪರಿಚಯಿಸಲಾಗಿದೆ ಅಂತ ಸೆರ್ಗೆ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply