ಕರಾಚಿ ಬಂದರಿನಿಂದ ಶಸ್ತ್ರಾಸ್ತ್ರ ರಫ್ತು! ಯುಕ್ರೇನ್‌ಗೆ ಪಾಕ್‌ ಆಯುಧ!

mathmagaa.com:

ರಷ್ಯಾ ದಾಳಿಯನ್ನ ಎದುರಿಸ್ತಿರೊ ಯುಕ್ರೇನ್‌ಗೆ… ಪಾಕಿಸ್ತಾನ, ಸಹಾಯ ಮಾಡೋಕೆ ಮುಂದಾಗಿದೆ ಅನ್ನೋ ವರದಿಗಳು ಕೇಳಿ ಬರ್ತಿವೆ. ಯುರೋಪ್‌ನ ಪೂರ್ವ ಭಾಗದಲ್ಲಿರೊ ದೇಶವೊಂದರ ಮೂಲಕ ಮಾರ್ಟರ್‌ಗಳು, ರಾಕೆಟ್‌ ಲಾಂಚರ್‌ಗಳು ಹಾಗೂ ಆರ್ಟಿಲ್ಲರಿಗಳನ್ನ ಸಾಗಿಸೋಕೆ ಪಾಕ್‌ ಯೋಚನೆ ಮಾಡ್ತಿದೆ ಅಂತ ಮಾಧ್ಯಮ ವರದಿಗಳು ಹೇಳ್ತಾ ಇವೆ. ಅಂದ್ಹಾಗೆ ರಷ್ಯಾದಿಂದ ಕಡಿಮೆ ಬೆಲೆಗೆ ತೈಲ ಕೊಡಿ ಅಂತ ಕೇಳ್ತಿರೊ ಪಾಕ್‌, ರಷ್ಯಾಗೆ ವಿರುದ್ದವಾಗಿ ಯುಕ್ರೇನ್‌ಗೆ ಸಹಾಯ ಮಾಡೋಕೆ ಮುಂದಾಗಿರೋದು ಈಗ ಹಲ್‌ ಚಲ್‌ ಸೃಷ್ಠಿ ಮಾಡಿದೆ. ಈ ಯುಕ್ರೇನ್‌ ಹಾಗೂ ಪಾಕಿಸ್ತಾನ ತುಂಬಾ ಹಿಂದಿನಿಂದಲೂ ಒಳ್ಳೆ ರಕ್ಷಣಾ ಸಂಬಂಧವನ್ನ ಹೊಂದಿವೆ. ಕೆಲ ದಿನಗಳ ಹಿಂದೆ ಯುಕ್ರೇನ್‌ನ ಅಧಿಕಾರಿಗಳ ತಂಡವೊಂದು ಪಾಕಿಸ್ತಾನಕ್ಕೆ ಭೇಟಿ ನೀಡಿ, ಅಣ್ವಸ್ತ್ರ ತಂತ್ರಜ್ಞಾನ ಕೊಡಿ ಅಂತ ಕೇಳಿತ್ತು ಅಂತ ಸ್ವತಃ ರಷ್ಯಾ ಆರೋಪ ಮಾಡಿತ್ತು. ಇದೀಗ ಮತ್ತೆ ಯುಕ್ರೇನ್‌ಗೆ ಹೆಲ್ಪ್‌ ಮಾಡೋಕೆ ಮುಂದಾಗಿರೊ ಪಾಕ್‌ಗೆ ಯಾವ ರೀತಿ ರಷ್ಯಾ ಪ್ರತಿಕ್ರಿಯೆ ನೀಡುತ್ತೆ ಅನ್ನೊದು ಕೂತುಹಲಕಾರಿಯಾಗಿದೆ. ಇನ್ನೊಂದ್‌ ಕಡೆ (ರಷ್ಯಾ ಆಕ್ರಮಿತ ಯುಕ್ರೇನ್‌ನ ಡೊನೆಟ್ಸ್ಕ್‌ ಪ್ರದೇಶದಲ್ಲಿ ಯುಕ್ರೇನ್‌ ಶೆಲ್‌ ದಾಳಿ ಮಾಡಿದೆ. ದಾಳಿಯಲ್ಲಿ ರಷ್ಯಾದ ಮಾಜಿ ಡೆಪ್ಯೂಟಿ ಪ್ರಧಾನಿ ಹಾಗೂ ರಷ್ಯಾ ಪರ ಅಧಿಕಾರಿ ಗಾಯಗೊಂಡಿದ್ದಾರೆ. ಗಾಯಗೊಂಡ ಮಾಜಿ ಡೆಪ್ಯೂಟಿ ಪ್ರಧಾನಿ ಡಿಮಿಟ್ರಿ ರೊಗೊಜಿನ್‌, ರಷ್ಯಾ ಆಕ್ರಮಿತ ಪ್ರದೇಶಗಳಲ್ಲಿ ಸೇನಾ ಸಲಹೆಗಳನ್ನ ನೀಡ್ತಿದ್ರು. ಹಾಗೂ ಮತ್ತೊಬ್ಬ ಗಾಯಗೊಂಡ ವಿಟಲಿ ಖೊಟ್ಸೆನ್‌ಕೊ ಡೊನೆಟ್ಸ್ಕ್‌ ಪ್ರದೇಶದಲ್ಲಿರೊ ರಷ್ಯಾ ಸರ್ಕಾರದ ಹೆಡ್‌ ಆಗಿದ್ರು.

-masthmagaa.com

Contact Us for Advertisement

Leave a Reply