ಬಿಲಾವಲ್‌ ಭುಟ್ಟೊ ಜರ್ದಾರಿ ಒಬ್ಬ ಭಯೋತ್ಪಾದಕತೆಯ ವಕ್ತಾರ: ಎಸ್‌. ಜೈಶಂಕರ್‌

masthmagaa.com:

ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವ್ರು ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೋ ಜರ್ದಾರಿ ಅವ್ರನ್ನ ಭಯೋತ್ಪಾದಕತೆಯ ವಕ್ತಾರ ಅಂತ ಕರೆದಿದ್ದಾರೆ. ಗೋವಾದಲ್ಲಿ ನಡೆದ SCO ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯ ನಂತ್ರ ಮಾತಾಡಿದ ಜೈಶಂಕರ್‌, ಜರ್ದಾರಿಯನ್ನ ʻpromoter, justifier and spokesperson of a terrorism industryʼ ಅಂದ್ರೆ ಭಯೋತ್ಪಾದಕ ಉದ್ಯಮವನ್ನ ಪ್ರೊಮೋಟ್‌ ಮಾಡುವ ಹಾಗೂ ಅದನ್ನ ಸಮರ್ಥನೆ ಮಾಡಿಕೊ‍ಳ್ಳುವ ವಕ್ತಾರ ಅಂತ ಬೆಂಕಿ ಕಾರಿದ್ದಾರೆ. ಇದೇ ವೇಳೆ ಭಯೋತ್ಪಾದನೆಯಿಂದ ನೋವನ್ನ ಅನುಭವಿಸಿದವರು ಅದರ ಸಪೋರ್ಟರ್‌ ಅಥ್ವಾ ಭಯೋತ್ಪಾದನೆಯಲ್ಲಿ ತೊಡಗಿರುವವರ ಜೊತೆಯಲ್ಲಿ ಕುಳಿತುಕೊಂಡು ಅದೇ ಭಯೋತ್ಪಾದನೆ ಕುರಿತು ಚರ್ಚೆ ನಡೆಸಲು ಸಾಧ್ಯವಿಲ್ಲ ಅಂತ ಬಿಲಾವಲ್ ಮುಖಕ್ಕೆ ಮಂಗಳಾರತಿ ಎತ್ತಿದ್ದಾರೆ. ಜರ್ದಾರಿ ಅವ್ರು SCO ಸದಸ್ಯ ರಾಷ್ಟ್ರದ ವಿದೇಶಾಂಗ ಸಚಿವರಾಗಿ ಭಾರತಕ್ಕೆ ಬಂದಿದ್ದಾರೆ. ಅದು ಕೇವಲ ಬಹುಪಕ್ಷೀಯ ರಾಜತಾಂತ್ರಿಕತೆಯ ಭಾಗವಾಗಿದೆ ಅಷ್ಟೆ ಅದಕ್ಕಿಂತ ಹೆಚ್ಚಿನದಾಗಿ ನಾವು ನೋಡೋದಿಲ್ಲ ಅಂತ ಜೈಶಂಕರ್‌ ಹೇಳಿದ್ದಾರೆ. ಇನ್ನು ಭಯೋತ್ಪಾದನೆ ವಿಷಯದಲ್ಲಿ ಪಾಕಿಸ್ತಾನದ ನಂಬಿಕೆ ಅದರ ವಿದೇಶಿ ವಿನಿಮಯ ಮೀಸಲಿಗಿಂತ ವೇಗವಾಗಿ ಕ್ಷೀಣಿಸುತ್ತಾಯಿದೆ ಅಂತ ಜೈಶಂಕರ್‌ ವ್ಯಂಗ್ಯವಾಡಿದ್ದಾರೆ. ಅಂದ್ಹಾಗೆ SCO ಸಭೆಯಲ್ಲಿ ಮಾತನಾಡಿದ್ದ ಬುಟ್ಟೊ ಕಾಶ್ಮೀರ ವಿಚಾರವನ್ನ ಕೆದಕಿದ್ರು. ಜಮ್ಮು-ಕಾಶ್ಮೀರದ ವಿಚಾರವಾಗಿ ಭಾರತ ತೆಗೆದುಕೊಂಡ ನಿರ್ಧಾರ, ಉಭಯ ದೇಶಗಳ ನಡುವಿನ ಮಾತುಕತೆ ಮಾರ್ಗವನ್ನ ಮುಚ್ಚಿತು ಅಂತ ಕಿಡಿಕಾರಿದ್ರು.

-masthmagaa.com

Contact Us for Advertisement

Leave a Reply