ಬ್ರೆಜಿಲ್‌, ಇರಾನ್‌ ಹಾಗೂ ಯುಎಇ ವಿದೇಶಾಂಗ ಸಚಿವರನ್ನ ಭೇಟಿ ಮಾಡಿದ ಎಸ್‌. ಜೈಶಂಕರ್‌!

masthmagaa.com:

ದಕ್ಷಿಣಾ ಆಫ್ರಿಕಾದಲ್ಲಿ ನಡೆದ ಬ್ರಿಕ್ಸ್‌ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಭಾಗವಹಿಸಿದ್ದಾರೆ. ಇದೇ ವೇಳೆ ಬ್ರಿಕ್ಸ್‌ ಸಭೆಯ ಸೈಡ್‌ಲೈನ್‌ನಲ್ಲಿ ಬ್ರೆಜಿಲ್‌, ಇರಾನ್‌ ಹಾಗೂ ಯುಎಇ ದೇಶಗಳ ವಿದೇಶಾಂಗ ಸಚಿವರುಗಳ ಜೊತೆಯಲ್ಲಿ ಮಾತುಕತೆ ನಡೆಸಲಾಗಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಜೈಶಂಕರ್‌, ಬ್ರೆಜಿಲ್‌ ಫಾರಿನ್‌ ಮಿನಿಸ್ಟರ್‌ ಮೌರೊ ವಿಯೆರಾ ಅವ್ರನ್ನ ಭೇಟಿಯಾಗಿ ಬ್ರಿಕ್ಸ್‌, IBSA‌, ಜಿ20 ಹಾಗೂ ವಿಶ್ವಸಂಸ್ಥೆ ಚೌಕಟ್ಟಿನಲ್ಲಿ ನಮ್ಮ ಸಹಕಾರವನ್ನ ಮುಂದುವರೆಸುವ ಕುರಿತು ಚರ್ಚಿಸಲಾಗಿದೆ ಅಂತ ತಿಳಿಸಿದ್ದಾರೆ. ಬಳಿಕ ಇರಾನ್‌ ವಿದೇಶಾಂಗ ಸಚಿವ ಅಮಿರಾ ಬ್ದೋಲಾಹಿಯಾನ್‌ ಅವ್ರನ್ನ ಭೇಟಿ ಮಾಡಿದ್ದು, ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧಗಳನ್ನ ಇನ್ನಷ್ಟು ಅಭಿವೃದ್ಧಿಗೊಳಿಸುವ ಬಗ್ಗೆ ಪರಿಶೀಲಿಸಲಾಗಿದೆ. ಜೊತೆಗೆ ಚಬಹಾರ್‌ ಬಂದರಿನ ಡೆವಲಪ್‌ಮೆಂಟ್‌ಗೆ ಒತ್ತು ನೀಡುವ ಕುರಿತು ಚರ್ಚಿಸಲಾಗಿದೆ ಅಂತ ಜೈಶಂಕರ್‌ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply