ಭಾರತ-ಅಮೆರಿಕ ಸಂಬಂಧದ ಆಧುನಿಕ ಶಿಲ್ಪಿ ಜೈಶಂಕರ್‌: ಅಮೆರಿಕ

masthmagaa.com:

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರ ಆಡಳಿತದ ಉನ್ನತ ಅಧಿಕಾರಿಯೊಬ್ರು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವ್ರನ್ನ ಹಾಡಿ ಹೊಗಳಿದ್ದಾರೆ. ಜೈಶಂಕರ್‌ ಅವ್ರು ಅಸಾಧಾರಣ ಪ್ರತಿಭೆಯಾಗಿದ್ದು, ಆಧುನಿಕ ಭಾರತ-ಅಮೆರಿಕ ಸಂಬಂಧದ ʻವಾಸ್ತುಶಿಲ್ಪಿʼ ಅಂತ ಕರೆದಿದ್ದಾರೆ. ಜೈಶಂಕರ್‌ ಅವರ ಅಮೆರಿಕ ಪ್ರವಾಸದ ವೇಳೆ ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮಾತಾಡಿರುವ ಅಮೆರಿಕ ಸ್ಟೇಟ್‌ ಡಿಪಾರ್ಟ್‌ಮೆಂಟ್‌ನ ಅಧಿಕಾರಿ ರಿಚರ್ಡ್‌ ವರ್ಮಾ ಈ ರೀತಿ ಹೇಳಿದ್ದಾರೆ. ಜೊತೆಗೆ ಜೈಶಂಕರ್‌ ಅವರ ನಾಯಕತ್ವ ಇಲ್ಲ ಅಂದಿದ್ರೆ, ಭಾರತ ಮತ್ತು ಅಮೆರಿಕ ಈಗಿರುವ ಸ್ಟ್ರಾಂಗ್‌ ಪ್ಲೇಸ್‌ನಲ್ಲಿ ಇರ್ತಾ ಇರ್ಲಿಲ್ಲ ಅಂತ ವರ್ಮಾ ಹೊಗಳಿದ್ದಾರೆ. ಅಂದ್ಹಾಗೆ ವರ್ಮಾ ಅವರು ಅಮೆರಿಕ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಅವರ ಆಡಳಿತಾವಧಿಯಲ್ಲಿ ಭಾರತಕ್ಕೆ, ಯುಎಸ್‌ ರಾಯಭಾರಿಯಾಗಿದ್ದ ಮೊದಲ ಭಾರತೀಯ ಮೂಲದ ಅಮೆರಿಕನ್ನರಾಗಿದ್ದರು.

-masthmagaa.com

Contact Us for Advertisement

Leave a Reply