ದೇಶದದಲ್ಲಿ ಕಚ್ಚತೀವು ದ್ವೀಪದ ಕಿಚ್ಚು! ಜೈಶಂಕರ್‌ ಪ್ರತಿಕ್ರಿಯೆ!

masthmagaa.com:

ಕಚ್ಚತೀವು ದ್ವೀಪ ಕೈ ತಪ್ಪೋದ್ರ ಹಿಂದೆ ನೆಹರು ಪಾತ್ರ ದೊಡ್ಡದಿದೆ ಅಂತ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಹೇಳಿದ್ದಾರೆ. ʻʻನೆಹರು ಕಚ್ಚತೀವು ದ್ವೀಪವನ್ನ ಶ್ರೀಲಂಕಕ್ಕೆ ಬಿಟ್ಕೊಡೋಕೆ ಬಯಸಿದ್ರು . 1976ರಲ್ಲಿ ಕಚ್ಚತೀವು ದ್ವೀಪ ಪ್ರದೇಶವನ್ನ ಶ್ರೀಲಂಕಾಕ್ಕೆ ಬಿಟ್ಕೊಟ್ಟ ಪರಿಣಾಮ, ಕಳೆದ 20 ವರ್ಷಗಳಲ್ಲಿ ಒಟ್ಟು 6,184 ಭಾರತೀಯ ಮೀನುಗಾರರನ್ನ ಶ್ರೀಲಂಕಾ ವಶಕ್ಕೆ ಪಡೆದುಕೊಂಡಿದೆ. ಜೊತೆಗೆ 1,175 ಭಾರತೀಯ ಮೀನುಗಾರಿಕಾ ದೋಣಿಗಳನ್ನ ಇದೇ ಅವಧಿಯಲ್ಲಿ ಲಂಕಾ ವಶಕ್ಕೆ ಪಡೆದಿದೆ. ಕಳೆದ 5 ವರ್ಷಗಳಿಂದ ಕಚ್ಚತೀವು ಸಮಸ್ಯೆಯನ್ನ ಸಂಸತ್ತಿನಲ್ಲಿ ಪದೇ ಪದೇ ಪ್ರಸ್ತಾಪಿಸಲಾಯ್ತು. ಈ ಬಗ್ಗೆ ತಮಿಳುನಾಡಿನ ಸಿಎಂ ಸಾಕಷ್ಟು ಬಾರಿ ನನಗೆ ಪತ್ರ ಬರೆದಿದ್ರು. ಈ ಸಮಸ್ಯೆ ಬಗ್ಗೆ ತಮಿಳುನಾಡಿನ ಈಗಿನ ಸಿಎಂ ಎಮ್‌ ಕೆ ಸ್ಟಾಲಿನ್‌ ಅವ್ರಿಗೆ ನಾನು 21 ಬಾರಿ ಪ್ರತಿಕ್ರಿಯೆ ನೀಡಿರೋದು ನನ್ನ ರೆಕಾರ್ಡ್‌ನಲ್ಲಿದೆ. ಇದು ಸಡನ್‌ ಆಗಿ ಉದ್ಭವಗೊಂಡಿರೋ ಸಮಸ್ಯೆಯಲ್ಲ. ಇದು ಹಲವು ವರ್ಷಗಳಿಂದ ಕಾಡ್ತಿರೋ ಸಮಸ್ಯೆ. ಆದ್ರೆ ಈ ವಿಚಾರವಾಗಿ, ತಮಗೆ ಯಾವ್ದೇ ರೀತಿ ಜವಾಬ್ದಾರಿ ಇಲ್ಲ ಅನ್ನೋ ಹಾಗೆ ಕಾಂಗ್ರೆಸ್‌ ಮತ್ತು ಡಿಎಮ್‌ಕೆ ಪಕ್ಷಗಳು ನಡ್ಕೋತಿವೆ ಅಂತ ಹೇಳಿದ್ದಾರೆ. ಅಲ್ದೆ ಈ ವಿವಾದದ ಬಗ್ಗೆ… ಈ ರೀತಿ ಪರಿಸ್ಥಿತಿ ಉಂಟಾಗೋಕೆ ಕಾರಣವೇನೆಂಬುದು ತಿಳಿದುಕೊಳ್ಳೋ ಹಕ್ಕು ಜನಸಾಮಾನ್ಯರಿಗಿದೆ. ಈ ವಿಚಾರವನ್ನ ಇಷ್ಟು ದಿನ ಸಾರ್ವಜನಿಕರ ಕಣ್ತಪ್ಪಿಸಿ ಮರೆಮಾಚಿದ್ಯಾರೆಂಬುದು ಮಾತ್ರ ಗೊತ್ತಿಲ್ಲʼ ಅಂದಿದ್ದಾರೆ. ಇನ್ನು ಈ ವೇಳೆ 1961ರಲ್ಲಿ ಕಚ್ಚತೀವು ದ್ವೀಪ ಸಂಬಂಧ ಅಂದಿನ ಪ್ರಧಾನಿ ಜವಾಹರಲಾಲ್‌ ನೆಹರು ಅವ್ರು ನೀಡಿರೋ ಸ್ಟೇಟ್‌ಮೆಂಟ್‌ನ್ನ ಜೈಶಂಕರ್‌ ಪ್ರಸ್ತಾಪ ಮಾಡಿದ್ದಾರೆ. ʻಪಂಡಿತ್‌ ನೆಹರು ಅವ್ರು ಇದು ಪುಟ್ಟ ದ್ವೀಪ, ಅದನ್ನ ಬಿಟ್ಟುಕೊಡೋಕೆ ನನಗೆ ಹಿಂಜರಿಗೆ ಇಲ್ಲ ಅಂತ ಹೇಳಿದ್ರು….ಅಂದ್ರೆ ಅವರಿಗೆ ಇದು ಒಂದ್‌ ರೀತೀಲಿ ಕಿರಿಕಿರಿ ಉಂಟು ಮಾಡೋ ವಿಷಯವಾಗಿತ್ತು…ತೊಂದರೆಯಾಗಿ ಕಂಡಿತ್ತು. ಹೀಗಾಗಿನೇ ಬೇಗ ಬೇಗ ಬಿಟ್ಕೊಟ್ಟು ಕೈತೊಳ್ಕೊಳ್ಳೋ ಕೆಲಸ ಮಾಡಿದ್ದಾರೆʼ ಅಂತ ನೆಹರು ವಿರುದ್ದವೂ ಆಕ್ರೋಶ ಹೊರಹಾಕಿದ್ದಾರೆ.

-masthmagaa.com

Contact Us for Advertisement

Leave a Reply