ಗ್ರೀಸ್‌ನಲ್ಲಿ ಸಲಿಂಗ ವಿವಾಹ,ದತ್ತು ಪದ್ದತಿಗೆ ಸಿಕ್ತು ಗ್ರೀನ್‌ ಸಿಗ್ನಲ್‌!

masthmagaa.com:

ಗ್ರೀಸ್‌ನಲ್ಲಿ ಸಲಿಂಗ ವಿವಾಹಕ್ಕೆ ಗ್ರೀನ್‌ ಸಿಗ್ನಲ್‌ ನೀಡಲಾಗಿದೆ. ಸಲಿಂಗ ವಿವಾಹವನ್ನ ಕಾನೂನುಬದ್ಧಗೊಳಿಸಲಾಗಿದೆ. ಜೊತೆಗೆ ಸಲಿಂಗ ದಂಪತಿಗಳಿಗೆ ಮಕ್ಕಳನ್ನ ಕೂಡ ದತ್ತು ತಗೋಳೋಕೆ ಅಪ್ರೂವ್‌ ನೀಡಲಾಗಿದೆ. ಹೀಗಂತ ಗ್ರೀಸ್‌ ಪ್ರಧಾನಿ ಕಿರಿಯಕೊಸ್‌ ಮಿಟ್ಸೊಟಕಿಸ್‌ ಫೆಬ್ರುವರಿ 16 ರಂದು ಅನೌನ್ಸ್‌ ಮಾಡಿದ್ದಾರೆ. ಈ ಮೂಲಕ ಗ್ರೀಸ್‌, ಸಲಿಂಗ ವಿವಾಹವನ್ನ ಕಾನೂನುಬದ್ಧಗೊಳಿಸಿದ ಮೊದಲ ಆರ್ಥೊಡಾಕ್ಸ್‌ ಕ್ರೈಸ್ತರ ಮೆಜಾರಿಟಿಯಿರೋ ದೇಶವಾಗಿದೆ. ಅಂದ್ಹಾಗೆ ಸರ್ಕಾರದ ಈ ನಿಲುವಿನ ವಿರುದ್ಧ ಅಲ್ಲಿನ ಕೆಲ ಆರ್ಥೋಡಾಕ್ಸ್‌ ಕ್ರೈಸ್ತರು ಪ್ರತಿಭಟನೆ ನಡೆಸಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply