ಫ್ಯಾಟ್ ಸರ್ಜರಿ ವೇಳೆ ಪ್ರಾಣ ಕಳೆದುಕೊಂಡ ಕಿರುತೆರೆ ನಟಿ ಚೇತನ ರಾಜ್!

masthmagaa.com:
ಜೀವನದಲ್ಲಿ ಸಕ್ಸೆಸ್ ಸಿಗಬೇಕು ಅಂದ್ರೆ ಹಾರ್ಡ್ ವರ್ಕ್ ಜೊತೆಗೆ ಸ್ಮಾರ್ಟ್ ವರ್ಕ್ ಮಾಡಬೇಕು, ಇನ್ಫ್ಟ್ಯಾಕ್ಟ್ ಸಕ್ಸೆಸ್ ಅನ್ನೋದು ಒಂದು ಡೆಸ್ಟಿನೇಷನ್ ಅಗಬಾರದು, ನಾವು ಅಂದುಕೊಳ್ಳುವ ಗುರಿ ಅಥವಾ ಡೆಸ್ಟಿನೇಷನ್ ಅನ್ನ ತಲುಪುವ ಪ್ರೋಸೆಸ್ ಅನ್ನ ನಾವು ಎಂಜಾಯ್ ಮಾಡ್ತ ಇದ್ದೀವಿ ಅಂತ ಆದರೆ ಅದೇ ನಿಜವಾದ ಸಕ್ಸೆಸ್.
ಜೊತೆಗೆ ಯಾವುದೇ ಒಂದು ಗುರಿಯನ್ನ ಮುಟ್ಟಬೇಕಾದರೆ ಅದಕ್ಕೆ ಅದರದೇ ಆದ ಸ್ಕಿಲ್ ಸೆಟ್ ಡೆವೆಲಪ್ ಮಾಡಿಕೊಬೇಕಾಗುತ್ತೆ, ತಮ್ಮ ಕ್ರಾಫ್ಟ್ ಬಗ್ಗೆ ಚೆನ್ನಾಗಿ ತಿಳಿಕೊಬೇಕಾಗುತ್ತೆ, it all happens eventually, it takes time, ಯಾವುದು ಕೂಡ immediate ಆಗಿ ಆಗೋದಿಲ್ಲ. ಎಲ್ಲಕಿಂತ ಮುಖ್ಯವಾಗಿ patience ತುಂಬಾ ಇಂಪಾರ್ಟೆಂಟ್ ಆಗುತ್ತೆ. ಜೊತೆಗೆ ಗುರಿ ಕಡೆಗೆ ನಿರಂತರ ಕೃಷಿ ಕೂಡ ಬಹಳ ಮುಖ್ಯ ಆಗತ್ತೆ.
ಅದು ಬಿಟ್ಟು ಶಾರ್ಟ್ ಕಟ್ ಹುಡುಕ್ತೀನಿ, ಆದಷ್ಟು ಬೇಗ ಫೇಮಸ್ ಆಗಬೇಕು, ಓವರ್ ನೈಟ್ ಸಕ್ಸೆಸ್ ಸಿಗಬೇಕು ಅಂತ ನಮ್ಮ originality ಅನ್ನ ಬಿಟ್ಟರೆ ಯಡವಟ್ಟು ಆಗೋದು ಪಕ್ಕ. ಇವತ್ತಿನ ಯುವ ನಟ ನಟಿಯರಲ್ಲಿ ಆದಷ್ಟು ಬೇಗ ಸಕ್ಸೆಸ್ ಸಿಗಬೇಕು ಅನ್ನೋ ಹುಮ್ಮಸ್ಸು ಜಾಸ್ತಿ ಇದೆ. ಒಳ್ಳೇದೇ  ಅದಕ್ಕೋಸ್ಕರ ಏನ್ ಬೇಕಾದರೂ ಮಾಡೋದಕ್ಕೆ ರೆಡಿ ಆಗ್ತಾರೆ. ಸ್ಕ್ರೀನ್ ಮುಂದೆ ಚೆನ್ನಾಗಿ ಕಾಣಬೇಕು ಅನ್ನೋ ಕಾರಣಕ್ಕೆ ತಮ್ಮ ಬಾಹ್ಯ ಸೌಂದರ್ಯವನ್ನು ಇಂಪ್ರೂವ್ ಮಾಡುವ ಸಲುವಾಗಿ liposuction, ಪ್ಲಾಸ್ಟಿಕ್ ಸರ್ಜರಿ, ಫ್ಯಾಟ್ ರಿಡಕ್ಷನ್ ಸರ್ಜರಿ ಅದೂ ಇದೂ ಅಂತ ಮಾಡಿಸಿಕೊಳ್ಳೋದು ನೋಡಿರುತ್ತೇವೆ.
ದೇಹದ ಆರೋಗ್ಯ ಚೆನ್ನಾಗಿ ಇಟ್ಕೊಬೇಕು ಅನ್ನೋ ಕಾರಣಕ್ಕೆ ನಿಯಮಿತ ವ್ಯಾಯಾಮ ಮಾಡೋದು, ಒಳ್ಳೆ healthy ಫುಡ್ ತಿನ್ನೋದು ಇದೆಲ್ಲ ಓಕೆ. ಆದರೆ ಅವೈಜ್ಞಾನಿಕ ಅಥವಾ ನೈಜತೆಗೆ ಹತ್ತಿರವಲ್ಲದ ಸರ್ಜರಿ ಎಲ್ಲ ಮಾಡಿಸೋದು ನಿಜಕ್ಕೂ ಅಪಾಯಕಾರಿ.
ಅಂತದೇ ಇಂದು ಘಟನೆ ಇವತ್ತು ಕನ್ನಡ ಚಿತ್ರರಂಗದ ಕಿರುತೆರೆ ನಟಿ ಚೇತನಾ ರಾಜ್ ವಿಷಯದಲ್ಲಿ ನಡೆದಿದೆ. ಫ್ಯಾಟ್ ರೀಡಕ್ಷನ್ ಸರ್ಜರಿ ಮಾಡಿಸೋದಕ್ಕೆ ಖಾಸಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದ ನಟಿ ಚೇತನಾ ಸರ್ಜರಿ ನಡೆಯುವಾಗಲೇ ದುರಂತ ಸಾವನ್ನ ಅಪ್ಪಿದ್ದಾರೆ.
 
Yes, ಕನ್ನಡ ಕಿರುತೆರೆಯ ಯುವ ನಟಿ ಚೇತನಾ ರಾಜ್ ಎಂಬುವರು ಇಂದು ಬೆಳಿಗ್ಗೆ ಸಾವನ್ನಪ್ಪಿದ್ದಾರೆ. 21 ವರ್ಷದ ಚೇತನಾ ರಾಜ್ ಸದ್ಯ ಕಲರ್ಸ್ ಕನ್ನಡದಲ್ಲಿ ಬರುತ್ತಿರುವ  ಗೀತಾ, ದೊರೆಸಾನಿ ಎಂಬ ಧಾರಾವಾಹಿಯಲ್ಲಿ ನಟಿಸುತ್ತಾ ಇದ್ದರು. ಇದಕ್ಕೂ ಮೊದಲು ಕೆಲ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದರು. ಅಲ್ಲದೇ ಇನ್ನೂ ಬಿಡುಗಡೆಯಾಗದ ಹವಾಯಾಮಿ ಎಂಬ ಹೊಸ ಸಿನಿಮಾದಲ್ಲೂ ನಟನೆ ಮಾಡಿದ್ದರು.
ಜೊತೆಗೆ ಚೇತನಾ ರಾಜ್ ಅವರಿಗೆ ಕಲರ್ಸ್ ಕನ್ನಡದ ʻಒಲವಿನ ನಿಲ್ದಾಣʼ ಅನ್ನೋ ಹೊಸ ಧಾರವಾಹಿಯಲ್ಲಿ ಮುಖ್ಯ ಪಾತ್ರ ಕೂಡ ಸಿಕ್ಕಿತ್ತು ಅನ್ನೋ ಮಾಹಿತಿ ಇದೆ.
 
ನಿಜಕ್ಕೂ ಆಗಿದ್ದೇನು ಅನ್ನೋದನ್ನ ನೋಡೋಣ. 
ಪೋಷಕರಿಗೆ ಮಾಹಿತಿ ನೀಡದೇ ಫ್ಯಾಟ್ ಸರ್ಜರಿ ಮಾಡಿಸಿಕೊಳ್ಳಲು ಚೇತನಾ ರಾಜ್ ಯೋಚನೆ ಮಾಡಿದ್ದರು. ನಿನ್ನೆ (ಮೇ 16) ಬೆಳಿಗ್ಗೆ 9,30 ಕ್ಕೆ ನವರಂಗ್ ಸರ್ಕಲ್ ಬಳಿ ಇರುವ ಡಾ. ಶೆಟ್ಟಿ ಕಾಸ್ಮೆಟಿಕ್ ಆಸ್ಪತ್ರೆಯಲ್ಲಿ ಚೇತನಾ ರಾಜ್ ಆಡ್ಮಿಟ್ ಆಗಿ ಸರ್ಜರಿ ಮಾಡಿಸಿಕೊಂಡಿದ್ದಾರೆ. ನಂತರ ಸರ್ಜರಿ ವಿಚಾರ ಗೊತ್ತಾಗಿ ಶೆಟ್ಟಿ ಆಸ್ಪತ್ರೆಗೆ ತಂದೆ ತಾಯಿ ಓಡಿ ಬಂದಿದ್ದಾರೆ. ಆ ಟೈಂ ಗೆ ಶಸ್ತ್ರಚಿಕಿತ್ಸೆ ಅಂದ್ರೆ ಸರ್ಜರಿ ವೇಳೆ ಕೊಬ್ಬು ತೆಗೆಯುವಾಗ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡು ಉಸಿರಾಡೋಕೆ ಸಾಧ್ಯವಾಗದೆ ಪರಿಸ್ಥಿತಿ ಗಂಭೀರವಾಗಿದೆ. ನಾಲ್ಕು ಗಂಟೆಗೆ ಶಂಕರಮಠದ ಕಾಡೆ ಆಸ್ಪತ್ರೆಗೆ ಶಿಫ್ಟ್ ಮಾಡಿ ಹೆಚ್ಚಿನ ಚಿಕಿತ್ಸೆಗೆ ಪ್ರಯತ್ನ ಮಾಡಲಾಗಿದೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಚೇತನಾ ಸಾವನ್ನಪ್ಪಿದ್ದಾರೆ.
ಈಗ, ಚೇತನಾ ಸಾವಿಗೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಅಂತ ತಂದೆ ತಾಯಿ ಪೊಲೀಸ್ ಕಂಪ್ಲೈಂಟ್ ಕೊಡೋದಕ್ಕೆ ಮುಂದಾಗಿದ್ದಾರೆ. ಇದಕ್ಕೂ ಮೊದಲು ಮಗಳು ಈ ಫ್ಯಾಟ್ ಸರ್ಜರಿ ಮಾಡ್ಸಿಕೊತೀನಿ ಅಂತ ಹೇಳಿದ್ಲು. ಆದ್ರೆ ನಾವು ಒಪ್ಪಿರಲಿಲ್ಲ ಆದ್ರೆ ಈಗ ನಮಗೆ ತಿಳಿಸದೇ ಸರ್ಜರಿ ಮಾಡಿಕೊಳ್ಳೋಕೆ ಹೋಗಿ ಪ್ರಾಣ ಕಳೆದುಕೊಂಡಿದ್ದಾಳೆ ಅಂತ ಹೇಳಿಕೊಂಡಿದ್ದಾರೆ. ಜೊತೆಗೆ ಯಾರೋ ಸೊಂಟ ದಪ್ಪ ಅಂತ ಹೇಳಿದರಂತೆ ಅದಕ್ಕೆ ಚೇತನಾ ಸರ್ಜರಿಗೆ ಒಳಗಾಗಿದ್ದಾರೆ. ನನ್ನ ಮಗಳು ಆರೋಗ್ಯವಾಗಿದ್ದಳು, ಫ್ಯಾಟ್ ತೆಗೆತೀನಿ ಅಂತ ಹೇಳಿ ಡಾಕ್ಟರುಗಳು ಈ ರೀತಿ ಮಾಡಿದ್ದಾರೆ. ನನ್ನ ಮಗಳು ದೊಡ್ಡ ನಟಿಯಾಗಬೇಕು ಅಂತ ತುಂಬಾ ಕನಸು ಇಟ್ಟುಕೊಂಡಿದ್ದಳು. ನನ್ನ ಮಗಳಿಗೆ ಯಾವುದೇ ಕಾಯಿಲೆ ಇರಲಿಲ್ಲ. ದಪ್ಪ ಇದ್ದೀಯಾ ಅಂತ ಯಾರೋ ಹೇಳಿದರು ಅಂತ ಮಗಳು ಸರ್ಜರಿಗೆ ಒಳಗಾಗಿ ಪ್ರಾಣ ಬಿಟ್ಟಿದ್ದಾಳೆ, ಈ ಆಸ್ಪತ್ರೆಯಲ್ಲಿ ಸರಿಯಾದ ICU ವ್ಯವಸ್ಥೆ ಕೂಡ ಇಲ್ಲ ಅಂತ ಅಳಲು ತೋಡಿಕೊಂಡಿದ್ದಾರೆ. ತಂದೆ ವರದರಾಜ್, ತಾಯಿ ಮುನಿಲಕ್ಷ್ಮಿ ಆಕ್ರಂದನ ಮುಗಿಲು ಮುಟ್ಟಿದೆ
ಚೇತನಾ ರಾಜ್ ಅವರು ತಮ್ಮ ಕುಟುಂಬಸ್ಥರೊಂದಿಗೆ ಬೆಂಗಳೂರು ಉತ್ತರ ತಾಲೂಕಿನ ಅಬ್ಬಿಗೆರೆಯಲ್ಲಿ ವಾಸ ಮಾಡ್ತಾ ಇದ್ದರು. ಚೇತನಾ ಸಾವಿನಿಂದ ಆಕೆಯ ಪೋಷಕರು ಕಂಗಾಲಾಗಿದ್ದಾರೆ. ಕಿರುತೆರೆ, ಹಿರಿತೆರೆಯಲ್ಲಿ ಮಿಂಚುತ್ತಿದ್ದ ಮಗಳು ಇನ್ನಿಲ್ಲ ಎಂಬ ಸುದ್ದಿ ತಿಳಿದು ಆಘಾತಕ್ಕೆ ಒಳಗಾಗಿದ್ದಾರೆ. ಮಗಳ ಸಾವಿಗೆ ಡಾ. ಶೆಟ್ಟಿ ಕಾಸ್ಮೆಟಿಕ್ ಆಸ್ಪತ್ರೆಯ ವೈದ್ಯರು ಕಾರಣ ಅಂತ ಆರೋಪಿಸಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ಮಗಳ ಸಾವಾಗಿದೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಚೇತನಾ ಅವರ ಸಾವಿನ ಬಗ್ಗೆ ದುಃಖ ತೋಡಿಕೊಂಡರುವ ಕೆಲ ಆಪ್ತರು ಚೇತನಾ ನೋಡೋಕೆ ದಪ್ಪ ಏನು ಇರಲಿಲ್ಲ, ಆಕ್ಟಿವ್ ಆಗೇ ಇದ್ದಳು, ಈ ಬೇಡದ ಸರ್ಜರಿ ಬಗ್ಗೆ ಆಕೆ ತಲೆಗೆ ಇಲ್ಲಿನ ವೈದ್ಯರುಗಳೇ ತುಂಬಿದ್ದಾರೆ. ಅನಗತ್ಯ ಸರ್ಜರಿಗೆ ಒಳಪಟ್ಟು ಚೇತನಾನ ಕಳೆದುಕೊಂಡಿದ್ದೀವಿ. ನಿನ್ನೆ ಚೆನ್ನಾಗಿ ಮಾತಾಡಿ ಕೊಂಡಿದ್ದಳು ಆದರೆ, ಇವತ್ತು ಇಲ್ಲ ಅಂದರೆ ನುಂಬೋಕೆ ಆಗ್ತಾ ಇಲ್ಲ ಅಂತ ಹೇಳಿಕೊಂಡಿದ್ದಾರೆ.
ಒಟ್ನಲ್ಲಿ ಯಾರೋ ದಪ್ಪ ಇದ್ದೀಯ ಅಂದ್ರು ಅನ್ನೋ ಕಾರಣಕ್ಕೆ ಸರ್ಜರಿ ಮಾಡಿ ಫ್ಯಾಟ್ ಕಮ್ಮಿ ಮಾಡಿಕೊಳ್ಳೋಕೆ ಪ್ರಯತ್ನ ಪಟ್ಟ ನಟಿ ಚೇತನಾ ಅವರು ದುರಂತ ಸಾವಿಗೆ ಈಡಾಗಿದ್ದಾರೆ.
-masthmagaa.com
Contact Us for Advertisement

Leave a Reply