ಶಾರುಖ್‌ ಸಿನಿಮಾದಲ್ಲಿ ಸ್ಯಾಂಡಲ್‌ವುಡ್‌ ಶಿವಣ್ಣ, SRK ಜೊತೆ SRK!

masthmagaa.com:

ಶಾರುಖ್‌ ಖಾನ್‌ ಅಭಿನಯದ ʼಪಠಾಣ್‌ʼ ಸಿನೆಮಾ ವಿವಾದಗಳ ನಡುವೆಯೇ ಬ್ಲಾಕ್‌ ಬಸ್ಟರ್‌ ಹಿಟ್‌ ಆಗಿತ್ತು. ಶಾರುಖ್‌ ಖಾನ್‌ ಫ್ಯಾನ್ಸ್‌ ಅಂತು ಅವ್ರ ನೆಕ್ಸ್ಟ ಮೂವೀಗಾಗಿ ವೇಟ್‌ ಮಾಡ್ತಾ ಇದಾರೆ. ಸದ್ಯ ಶಾರುಖ್‌ ಖಾನ್‌ ʼಜವಾನ್‌ʼ ಮೂವೀ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದಾರೆ. ʼಜವಾನ್‌ʼ ಮೂವೀಯನ್ನ ʼಅಟ್ಲಿʼಯವರು ಡೈರೆಕ್ಟ್‌ ಮಾಡಲಿದ್ದಾರೆ. ಈ ಮೂವೀಯನ್ನ ಪ್ಯಾನ್‌ ಇಂಡಿಯಾ ಮೂವೀ ಮಾಡ್ಬೇಕು ಅಂತ ಬೇರೆ ಬೇರೆ ಭಾಷೆಯ ಹೀರೊಗಳನ್ನ ಗೇಸ್ಟ್‌ ರೋಲ್‌ಗೆ ಕರೆಸೋ ಪ್ಲಾನ್‌ ಮಾಡ್ತಾ ಇದಾರೆ. ಅದರಲ್ಲಿ ಕೆಲವೊಬ್ಬರು ಒಕೆ ಅಂತ ಕೂಡ ಹೇಳಿದ್ದಾರೆ, ಇನ್ನೂ ಕೆಲವೊಬ್ರು ಡೈರೆಕ್ಟ್‌ ಆಗೆ ಆಗೋದಿಲ್ಲ ಅಂತ ಹೇಳಿದ್ದಾರೆ. ತಮಿಳಿನ ವಿಜಯ್‌ ಅವರು ಈ ಸಿನೆಮಾದಲ್ಲಿ ಕಾಣಿಸಿಕೊಳ್ಳೋದು ಆಲ್ಮೊಸ್ಟ್‌ ಪಕ್ಕಾ ಆಗಿದೆ. ತೆಲುಗಿನ ಅಲ್ಲು ಅರ್ಜುನ್‌ ಪುಷ್ಪ 2 ರಲ್ಲಿ ಬ್ಯುಸಿ ಇರೋದ್ರಿಂದ ಈ ಸ್ಕ್ರಿಪ್ಟ್‌ ಮುಗಿಯೋ ತನಕ ಬೇರೆ ಮೂವಿಯಲ್ಲಿ ನಟಿಸೊಲ್ಲ ಅಂತ ಡೈರೆಕ್ಟ್‌ ಆಗೇ ಹೇಳಿದ್ದಾರೆ. ಕನ್ನಡದಲ್ಲಿ ಶಿವರಾಜ್‌ ಕುಮಾರ್‌ ನಟಿಸಬಹುದು ಅಂತ ಕೂಡ ಸುದ್ದಿ ಆಗಿದೆ. ಆದರೆ ಶಿವರಾಜ್‌ ಕುಮಾರ್‌ ಇದರ ಬಗ್ಗೆ ಯಾವುದೇ ರೀತಿಯ ಸ್ಪಷ್ಠೀಕರಣ ಕೊಟ್ಟಿಲ್ಲ. ಶಾರುಖ್‌ ಖಾನ್‌ಗೆ ನಯನತಾರಾ ನಾಯಕಿಯಾಗಿ ನಟಿಸಲಿದ್ದಾರೆ. ಆಕ್ಷನ್‌ ಥ್ರಿಲ್ಲರ್‌ ಮೂವೀ ಇದಾಗಿದ್ದು, ಆಲ್‌ರೆಡಿ ಟೀಸರ್‌ ಕೂಡ ರಿಲೀಸ್‌ ಆಗಿದೆ. 2023ರ ಎಂಡ್‌ಲ್ಲಿ ಈ ಮೂವಿ ರಿಲೀಸ್‌ ಆಗತ್ತೆ.

-masthmagaa.com

Contact Us for Advertisement

Leave a Reply