ಸಂದೇಶ್‌ಕಾಲಿ ಕೇಸ್:‌ ಶಹಜಹಾನ್‌ ಶೇಖ್‌ ಮೇಲೆ ED ಕೇಸ್!

masthmagaa.com:

ಪಶ್ಚಿಮ ಬಂಗಾಳದ ಸಂದೇಶ್‌ಕಾಲಿ ಕೇಸ್‌ನ ಆರೋಪಿ TMC ನಾಯಕ ಶಹಜಹಾನ್‌ ಶೇಖ್‌ ವಿರುದ್ಧ ಮನಿ ಲಾಂಡ್ರಿಂಗ್‌ ಕೇಸ್‌ ದಾಖಲಾಗಿದೆ. ಹಾಗಾಗಿ ಲೈಂಗಿಕ ಕಿರುಕುಳ, ಭೂಮಿ ಕಬಳಿಕೆ ನಂತರ ಈಗ EDಯ ಮನಿ ಲಾಂಡ್ರಿಂಗ್‌ ಕೇಸ್‌ನಲ್ಲೂ ಬುಕ್‌ ಆಗಿದ್ದಾನೆ. ಇನ್ನು ಇದೇ ಸಂದೇಶ್‌ಕಾಲಿಯಲ್ಲಿ ವೇಶ್ಯಾವಾಟಿಕೆ ನಡೆಸ್ತಿದ್ದ ಆರೋಪದ ಮೇರೆಗೆ ಬಿಜೆಪಿ ನಾಯಕನೊಬ್ಬನನ್ನ ಅರೆಸ್ಟ್‌ ಮಾಡಲಾಗಿದೆ. ಸಬ್ಯಸಾಚಿ ಘೋಷ್‌ ಅನ್ನೋ ವ್ಯಕ್ತಿಯನ್ನ ವೆಸ್ಟ್‌ ಬೆಂಗಾಲ್‌ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಸಂದೇಶ್‌ಕಾಲಿ ಕೇಸ್‌ ವಿಚಾರವಾಗಿ ಬಂಗಾಳದಲ್ಲಿ ಬಿಜೆಪಿ-ಟಿಎಂಸಿ ರಾಜಕೀಯ ಕೆಸರೆರಚಾಟ ಜೋರಾಗಿದೆ.

-masthmagaa.com

Contact Us for Advertisement

Leave a Reply