ಹೈದ್ರಾಬಾದ್‌ ವಿರುದ್ದ ಸೋಲು: KL ರಾಹುಲ್‌ಗೆ ಟೀಮ್‌ ಮಾಲೀಕರಿಂದ ಕ್ಲಾಸ್!

masthmagaa.com:

ಬುಧವಾರ ಹೈದ್ರಾಬಾದ್‌ ವಿರುದ್ದ ಲಖನೌ ಟೀಮ್‌ ಹೀನಾಯ ಸೋಲು ಕಂಡ ನಂತ್ರ ತಂಡದ ಮಾಲೀಕ ಸಂಜೀವ್ ಗೋಯೆಂಕಾ, ನಾಯಕ KL ರಾಹುಲ್‌ ವಿರುದ್ದ ಗರಂ ಅಂತ ಗೊತ್ತಾಗಿದೆ. ಪಂದ್ಯ ಸೋಲ್ತಿದ್ದಂತೆ ಡಗೌಟ್‌ನತ್ತ ಬಂದ ರಾಹುಲ್‌ಗೆ LSG ಮಾಲೀಕ ಸಂಜೀವ್ ಗೋಯೆಂಕಾ ಬೈದಿದ್ದಾರೆ. ಈ ವೇಳೆ ರಾಹುಲ್‌ ಅವ್ರಿಗೆ ಮ್ಯಾಚ್‌ ಬಗ್ಗೆ ಸ್ಪಷ್ಟನೆ ನೀಡ್ತಿರೊ ದೃಶ್ಯ ಸೊಶಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ. ಈ ವಿಚಾರವಾಗಿ ಸಂಜೀವ್‌ರ ವರ್ತನೆಗೆ ಸೊಶಿಯಲ್‌ ಮೀಡಿಯಾದಲ್ಲಿ ವ್ಯಾಪಾಕ ಟೀಕೆಗಳು ಕೇಳಿ ಬರ್ತಿವೆ. ಅಂದ್ಹಾಗೆ ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಲಖನೌ 4 ವಿಕೆಟ್‌ ನಷ್ಟಕ್ಕೆ 165 ಗಳಿಸಿತ್ತು. ಗುರಿ ಬೆನ್ನತ್ತಿದ್ದ ಹೈದ್ರಾಬಾದ್‌ 9.4 ಓವರ್‌ಗಳಲ್ಲಿ 167ರನ್‌ ಗಳಿಸಿ 10 ವಿಕೆಟ್‌ಗಳ ಭರ್ಜರಿ ಗೆಲವು ದಾಖಲಿಸಿತ್ತು. ಹೀಗಾಗಿ ಲಖನೌ ಟೀಮ್‌ ಮಾಲೀಕರು ಗರಂ ಆಗಿದ್ರು ಅಂತೇಳಲಾಗ್ತಿದೆ.

-masthmagaa.com

Contact Us for Advertisement

Leave a Reply