ಇಸ್ರೇಲ್‌ ಹಮಾಸ್‌ ಯುದ್ದ ತೀವ್ರ! ಅಮೆರಿಕಗೆ ಹಾರಲಿದ್ದಾರೆ ಸೌದಿಯ ರಕ್ಷಣಾ ಮಂತ್ರಿ!

masthmagaa.com:

ಸೌದಿ ಅರೇಬಿಯಾದ ರಕ್ಷಣಾ ಸಚಿವ ಪ್ರಿನ್ಸ್‌ ಖಾಲಿದ್‌ ಬಿನ್‌ ಸಲ್ಮಾನ್‌ ಅವರು ಅಮೆರಿಕದ ವೈಟ್‌ ಹೌಸ್‌ಗೆ ಭೇಟಿ ನೀಡಲಿದ್ದಾರೆ. ಜೋ ಬೈಡನ್‌ ಆಡಳಿತದ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಮೀಟಿಂಗ್‌ ನಡೆಸೋದಕ್ಕಾಗಿ ಅಕ್ಟೋಬರ್‌ 30ರ ಸೋಮವಾರದಂದು ಅಮೆರಿಕಗೆ ಭೇಟಿ ಕೊಡಲಿದ್ದಾರೆ. ಇಸ್ರೇಲ್‌-ಹಮಾಸ್‌ ಯುದ್ಧ ತೀವ್ರಗೊಳ್ತಿರೋ ಹಿನ್ನಲೆಯಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ. ಅಮೆರಿಕಗೆ ಭೇಟಿ ಕೊಡಲಿರೋ ಸೌದಿಯ ರಕ್ಷಣಾ ಸಚಿವರು ಅಲ್ಲಿ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್‌ ಸಲ್ಲಿವಾನ್‌, ರಕ್ಷಣಾ ಕಾರ್ಯದರ್ಶಿ ಲಾಯ್ಡ್‌ ಆಸ್ಟಿನ್‌, ಸ್ಟೇಟ್‌ ಸೆಕ್ರಟ್ರಿ ಆಂಟನಿ ಬ್ಲಿಂಕನ್‌ ಹಾಗೂ ಇನ್ನಿತರೆ ಸೀನಿಯರ್‌ ಅಫಿಶಿಯಲ್ಸ್‌ನ್ನ ಭೇಟಿ ಮಾಡಲಿದ್ದಾರೆ.

-masthmagaa.com

Contact Us for Advertisement

Leave a Reply