IPL ಮೇಲೆ ಸೌದಿ ಕಣ್ಣು! ದೇಶ-ವಿದೇಶಗಳಿಗೆ ಹರಡಲಿದೆಯ IPL ಫೀವರ್?‌

masthmagaa.com:

ಇಂಡಿಯನ್ ಪ್ರೀಮಿಯರ್‌ ಲೀಗ್‌(IPL)ನಲ್ಲಿ ಪಾಲುದಾರನಾಗೋಕೆ ಸೌದಿ ಪ್ರಿನ್ಸ್‌ ಮೊಹಮದ್‌ ಬಿನ್‌ ಸಲ್ಮಾನ್‌ ಫುಲ್‌ ಇಂಟರಸ್ಟ್‌ ತೋರ್ಸಿದ್ದಾರೆ ಅಂತ ತಿಳಿದು ಬಂದಿದೆ. IPLನ್ನ 30 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು ಎರಡೂ ವರೆ ಲಕ್ಷ ಕೋಟಿ ರೂಪಾಯಿಗಳ ಕಂಪನಿಯನ್ನಾಗಿಸೊ ಆಫರ್‌ನ್ನ ಸಲ್ಮಾನ್‌ ಸಲಹೆಗಾರರು ಭಾರತದ ಅಧಿಕಾರಿಗಳಿಗೆ ನೀಡಿದ್ದಾರೆ. G-20 ವೇಳೆ ಸೌದಿ ಪ್ರಿನ್ಸ್ ಭಾರತದಲ್ಲಿದ್ದಾಗ ಇಂತಹ ಬೆಳವಣಿಗೆ ಆಗಿದ್ದು, IPLನ್ನ ಇತರ ದೇಶಗಳಿಗೆ ಎಕ್ಸ್‌ಪ್ಯಾಂಡ್‌ ಮಾಡೋಕೆ 5 ಬಿಲಿಯನ್‌ ಡಾಲರ್‌, ಅಂದ್ರೆ ಸುಮಾರು 41.5 ಸಾವಿರ ಕೋಟಿ ರೂಪಾಯಿ ಇನ್‌ವೆಸ್ಟ್‌ ಮಾಡೋಕೆ ಸೌದಿ ಉತ್ಸುಕವಾಗಿದೆ ಅಂತ ಗೊತ್ತಾಗಿದೆ. ಈ ಬಗ್ಗೆ BCCI ಯಾವುದೆ ರಿಪ್ಲೈ ನೀಡಿಲ್ಲ. ಅಂದ್ಹಾಗೆ ಪ್ರಪಂಚದ ಅತಿ ಶ್ರೀಮಂತ ಲೀಗ್‌ಗಳಲ್ಲಿ ಒಂದಾಗಿರೊ IPL ಫಾರ್ಮುಲಾ ಬಳಸಿ ಹಲವು ದೇಶಗಳಲ್ಲಿ ಟೂರ್ನಮೆಂಟ್‌ಗಳು ನಡಿತಿರೊ ಈ ಟೈಮಲ್ಲಿ BCCI ಯಾವ ನಿರ್ಧಾರಕ್ಕೆ ಬರುತ್ತೆ ಅಂತ ಕಾದು ನೋಡ್ಬೇಕಿದೆ.

-masthmagaa.com

Contact Us for Advertisement

Leave a Reply