ಚೈನೀಸ್‌-ಅರಬ್‌ ಸಭೆಗೆ ಷಿ ಜಿನ್‌ಪಿಂಗ್‌ ಭೇಟಿ!

masthmagaa.com:

ಅಮೆರಿಕಗೆ -ಸೌದಿ ಸಂಬಂಧ ಹಳಸಿ ಹಳ್ಳ ಹಿಡಿತಿರೋ ಹೊತ್ತಲ್ಲೇ ಇದೀಗ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಸೌದಿ ಅರೆಬಿಯಾ ಪ್ರವಾಸ ಕೈಗೊಳ್ಳಲಿದ್ದಾರೆ. ಡಿಸೆಂಬರ್‌ 7ರಂದು ಸೌದಿಗೆ ಬರಲಿರೊ ಜಿನ್‌ಪಿಂಗ್‌ರಿಗೆ ಕ್ರೌನ್‌ ಪ್ರಿನ್ಸ್‌ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಆತಿಥ್ಯ ನೀಡಲಿದ್ದಾರೆ. ಅರಬ್‌ ದೇಶಗಳ ನಾಯಕ ನಾನೇ ಅನ್ನೋದನ್ನ ಮತ್ತೆ ಸಾಬೀತು ಮಾಡೋಕೆ, ಹಾಗೂ ಅಮೆರಿಕಗೆ ಟಕ್ಕರ್‌ ಕೊಡೋಕೆ ಈ ಚೈನೀಸ್‌-ಅರಬ್‌ ಸಭೆಯನ್ನ ಆಯೋಜನೆ ಮಾಡಲಾಗಿದೆ. ಇದಕ್ಕಾಗಿ ಮಧ್ಯ ಏಷ್ಯಾ ಹಾಗೂ ಉತ್ತರ ಆಫ್ರಿಕಾದ ನಾಯಕರನ್ನ MBS ಇನ್ವೈಟ್‌ ಮಾಡಿದ್ದಾರೆ ಅಂತ ಹೇಳಲಾಗಿದೆ. ಗಲ್ಫ್‌ ರಾಷ್ಟ್ರಗಳ ಜೊತೆ ಇಂಧನ, ಭದ್ರತೆ ಹಾಗೂ ಹೂಡಿಕೆ ಸೇರಿದಂತೆ ಇತರ ಒಪ್ಪಂದಗಳಿಗೆ ಹಾಗೂ MoUಗಳಿಗೆ ಚೀನಾ ಸಹಿ ಹಾಕುವ ನಿರೀಕ್ಷೆಯಿದೆ ಅಂತ ಅರಬ್‌ ಅಧಿಕಾರಿಗಳು ಹೇಳಿದ್ದಾರೆ. ಈ ಬೆಳವಣಿಗೆ ನಿಜಕ್ಕೂ ಬೈಡೆನ್‌ ಆಡಳಿತದ ಅಮೆರಿಕಗೆ ಬಿಗ್‌ ಶಾಕ್‌ ಅಂತಾನೇ ಅಂದಾಜು ಮಾಡಲಾಗ್ತಿದೆ. ಯಾಕಂದ್ರೆ, ಈಗಾಗಲೇ ಕಶೋಗಿ ವಿಚಾರವಾಗಿ ವೈಯಕ್ತಿಕ ಹಂತದಲ್ಲಿ ಮುನಿಸಿಕೊಂಡು ಕೂತಿರೋ ಅಮೆರಿಕ ಹಾಗೂ ಸೌದಿ ನಾಯಕರು ತೈಲದ ವಿಚಾರದಲ್ಲೂ ಭಿನ್ನಾಭಿಪ್ರಾಯ ಹೊಂದಿದ್ದಾರೆ. ರಷ್ಯಾದ ಮೇಲೆ ತೈಲ ನಿರ್ಬಂಧ ಹಾಕಿದ ನಂತರ ಪಾಶ್ಚಿಮಾತ್ಯ ದೇಶಗಳಿಗೆ ತೈಲದ ಕೊರತೆ ಎದುರಾಗಿದೆ. ಹೀಗಾಗಿ ರಷ್ಯಾಗೆ ಪರ್ಯಾಯ ತೈಲ ಉತ್ಪಾದಕನನ್ನ ಅಮೆರಿಕ ಮತ್ತು ಫ್ರೆಂಡ್ಸಗಳು ಹುಡುಕ್ತಿದ್ದಾರೆ. ಆದ್ರೆ ಕಳೆದ ವಾರಗಳ ಹಿಂದೆ ನಾವು ತೈಲವನ್ನ ಮುಂಚೆ ಉತ್ಪಾದನೆ ಮಾಡ್ತಿದ್ದಕ್ಕಿಂತ ಕಡಿಮೆ ಮಾಡ್ತೀವಿ ಅಂತ ಸೌದಿ ನೇತೃತ್ವದ ಒಪೆಕ್‌ ದೇಶಗಳು ಘೋಷಣೆ ಮಾಡಿದ್ವು. ಇದಾದ ಬಳಿಕ ಒಂದು ಕಾಲದಲ್ಲಿ ಬಿಟ್ಟಿರಲಾರದ ಗೆಳೆಯರಂತಿದ್ದ ಅಮೆರಿಕ ಹಾಗೂ ಸೌದಿ ದೂರ ಆಗೋಕೆ ಶುರುವಾಗಿವೆ. ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸ್ತಿರೋ ಅಮೆರಿಕ ವೈರಿ ಚೀನಾ ಈಗ ಸೌದಿಗೆ ಭೇಟಿ ಕೊಡ್ತಿರೋದು ಜಾಗತಿಕ ರಾಜಕೀಯದಲ್ಲಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ.

-masthmagaa.com

Contact Us for Advertisement

Leave a Reply