ಕೊಲ್ಕತ್ತಾ: ಚಲಿಸುವ ಕಾರಿನಲ್ಲಿ ಬಾಲಕರ ಹತ್ಯೆ, ಕೇಸ್‌ನ್ನ CIDಗೆ ಹಸ್ತಾಂತರಿಸಿದ ಮಮತಾ ಬ್ಯಾನರ್ಜಿ!

masthmagaa.com:

ಕೊಲ್ಕತ್ತಾದಲ್ಲಿ 10ನೇ ತರಗತಿಯ ಇಬ್ಬರು ಬಾಲಕರನ್ನ ಆರೋಪಿಗಳು ಕಾರಿನಲ್ಲಿ ಹತ್ಯೆ ಮಾಡಿದ ಪ್ರಕರಣವನ್ನ ಇದೀಗ CIDಗೆ ಹಸ್ತಾಂತರಿಸಲಾಗಿದೆ. ಆಗಸ್ಟ್‌ 22 ರಂದು ಈ ಘಟನೆ ನಡೆದಿದ್ದು, ಪೊಲೀಸರು ವಿಷಯವನ್ನ ಸಿರಿಯಸ್‌ ಆಗಿ ತೆಗೆದುಕೊಂಡಿಲ್ಲ ಅಂತ ಬಾಲಕರ ಕುಟುಂಬದವ್ರು ಆರೋಪಿಸಿದ್ರು. ಇದರ ಹಿನ್ನಲೆಯಲ್ಲಿ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಈ ಕೇಸ್‌ನ್ನ CIDಗೆ ಹಸ್ತಾಂತರಿಸಿದ್ದಾರೆ. ಅಂದ್ಹಾಗೆ ಆಗಸ್ಟ್‌ 22 ರಂದು ಆರೋಪಿಗಳು ಬಾಲಕರನ್ನ ಚಲಿಸೋ ಕಾರಿನಲ್ಲಿ ಕತ್ತು ಹಿಸುಕಿ ಕೊಂದು, ಬಳಿಕ ಅವರ ದೇಹಗಳನ್ನ ಕೊಲ್ಕತ್ತಾದ ಹೈವೇ ಪಕ್ಕದ ಕೆನಲ್‌ನಲ್ಲಿ ಬೀಸಾಕಿದ್ರು. ಶವಗಳು ಮೊನ್ನೆಯಷ್ಟೇ ಪತ್ತೆಯಾಗಿದ್ದು, ಕೇಸ್‌ಗೆ ಸಂಬಂಧಿಸಿದಂತೆ 4 ಆರೋಪಿಗಳನ್ನ ಈಗಾಗಲೇ ಅರೆಸ್ಟ್‌ ಮಾಡಲಾಗಿದೆ. ಆರೋಪಿಗಳು ಬೈಕ್‌ ತೆಗೆದುಕೊಳೋದಕ್ಕೆ 50 ಸಾವಿರ ಬೇಕಾಗಿತ್ತು. ಆ ಕಾರಣ ಈ ಕಿಡ್ನ್ಯಾಪ್‌ ಮಾಡಿದ್ದಾರೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply