ಬ್ರೆಜಿಲ್‌ನಲ್ಲಿ ಪತ್ತೆಯಾದ ಡೈನೋಸಾರ್‌ ಪ್ರಭೇದಗಳ ಹೆಜ್ಜೆ ಗುರುತು!

masthmagaa.com:

ಬ್ರೆಜಿಲ್‌ನಲ್ಲಿ ಡೈನೋಸಾರ್‌ ಪ್ರಭೇದಗಳ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಅಲ್ಲಿನ ಅರರಾಕ್ವಾರಾ ನಗರದಲ್ಲಿ ಪತ್ತೆಯಾದ ಡೈನೋಸಾರ್‌ ಪ್ರಭೇದಗಳ ಹೆಜ್ಜೆ ಗುರುತುಗಳನ್ನ ಬ್ರೆಜಿಲ್‌ನ ವೈಜ್ಞಾನಿಕ ಜನರಲ್‌ ಕ್ರಿಟಿಷೀಯನ್ ರಿಸರ್ಚ್‌ನಲ್ಲಿ ಪ್ರಕಟಿಸಲಾಗಿದೆ. ಪತ್ತೆಯಾದ ಹೆಜ್ಜೆ ಗುರುತುಗಳನ್ನ ಆಧರಿಸಿ ಡೈನೋಸಾರ್‌ ಪ್ರಭೇದಗಳಿಗೆ ಲಿಯೊನಾರ್ಡಿ ನೇತೃತ್ವದ ಬ್ರೆಜಿಲ್‌ನ ವಿಜ್ಞಾನಿಗಳ ತಂಡ “ಫಾರ್ಲೋ ವಿಚ್ನಸ್ ರಾಪಿಡಸ್” ಎಂಬ ಹೆಸರಿಟ್ಟಿದೆ. ಅಂದ್ರೆ ʻಫಾಸ್ಟ್‌ ಫಾಲೋರ್ಸ್‌ ಟ್ರ್ಯಾಕ್‌ʼ. ಇದೊಂದು ಮಾಂಸಹಾರಿ, ಸಣ್ಣ ವೇಗದ ಜೀವಿಯಾಗಿದ್ದು, 125 ಮಿಲಿಯನ್ ವರ್ಷಗಳ ಹಿಂದೆ‌ ಅಂದ್ರೆ ಆರಂಭಿಕ ಕ್ರಿಟೇಶಿಯಸ್ ಯುಗದಲ್ಲಿ, ಬ್ರೆಜಿಲ್‌ನ ಶುಷ್ಕ ಭೂ ಪ್ರದೇಶಗಳಲ್ಲಿ ಇದು ಸಂಚರಿಸಿದೆ ಅಂತ ಗೊತ್ತಾಗಿದೆ. ಈ ಡೈನೋಸಾರ್‌ ಪ್ರಭೇದಗಳ ಹೆಜ್ಜೆ ಗುರುತುಗಳು ಈ ಹಿಂದಿನ ʼಟ್ರ್ಯಾಕ್ವೇಸ್‌ʼ ಪಳಿಯುಳಿಕೆಗಳಿಗಿಂತ ತುಂಬಾ ಡಿಫ್‌ರೆಂಟ್‌ ಆಗಿದ್ದು, ಉದ್ದವಾದ ತೆಳ್ಳಗಿನ ಕಾಲ್ಬೆರಳುಗಳು, ವಿಶಾಲವಾದ ದಾಪುಗಾಲುಗಳು ಚುರುಕಾದ ಮರುಭೂಮಿಯಲ್ಲಿ ವಾಸಿಸುವ ಡೈನೋಸಾರ್‌ ಪ್ರಭೇಧಗಳನ್ನ ಹೋಲುತ್ತವೆ ಅಂತ ತಜ್ಞರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply