ಆಸ್ಟ್ರೇಲಿಯಾಗೆ ಎದುರಾಗಿದೆ ವಿಷಯುಕ್ತ ವಿಕಿರಣ ಕ್ಯಾಪ್ಸುಲ್‌ ಭೀತಿ!

masthmagaa.com:

ಆಸ್ಟ್ರೇಲಿಯಾ ವಿಕಿರಣ ವಸ್ತುಗಳ ಭೀತಿಯಿಂದ ದೇಶದ ಕೆಲವು ಕಡೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ. ಇಲ್ಲಿನ ಪರ್ತ್‌ ನಗರದ ಮಾರ್ಗ ಮಧ್ಯೆ ಗಣಿಗಾರಿಕೆಯಲ್ಲಿ ಬಳಸಲಾಗೋ ರೇಡಿಯೋಆಕ್ಟಿವ್‌ ಅಥ್ವಾ ವಿಕಿರಣಶೀಲ ಕ್ಯಾಪ್ಸುಲ್‌ ಟ್ರಕ್‌ನಲ್ಲಿ ಸಾಗಿಸೋ ಟೈಮ್‌ನಲ್ಲಿ ಕಳೆದುಹೋಗಿದೆ. ವಿಷಯುಕ್ತ ವಿಕಿರಣ ವಸ್ತುವಾದ ಕ್ಯಾಪ್ಸುಲ್‌ ಮಿಸ್‌ ಆಗಿದೆ. ಇದೇನಾದ್ರು ಮನುಷ್ಯನ ದೇಹಕ್ಕೆ ಎಕ್ಸ್‌ಪೋಸ್‌ ಆದ್ರೆ ಚರ್ಮ ಕೆಂಪಾಗುತ್ತೆ ಹಾಗೂ ವಿಕಿರಣ ಸುಡುವಿಕೆ ಉಂಟಾಗೋ ಸಾಧ್ಯತೆಯಿದೆ ಅಥ್ವಾ ವಿಕಿರಣ ಖಾಯಿಲೆ ಬರುತ್ತೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ಅದಕ್ಕಾಗಿ ಹುಡುಕಾಟ ನಡೆಸಲಾಗ್ತಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply