UPಯಲ್ಲಿ ಮತ್ತೊಂದು ಎನ್‌ಕೌಂಟರ್‌! ಉಮೇಶ್‌ ಪಾಲ್‌ ಹತ್ಯೆ ಆರೋಪಿಗಳಲ್ಲಿ 2 ವಿಕೆಟ್‌ ಡೌನ್!

masthmagaa.com:

ಯೋಗಿ ನೇತೃತ್ವದ ಉತ್ತರ ಪ್ರದೇಶ ಈಗ ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡ್ತಿದ್ದು ಎಲ್ಲರ ಗಮನವನ್ನ ತನ್ನ ಕಡೆಗೆ ಕೇಂದ್ರಿಕರಿಸಿಕೊಂಡಿದೆ. ಎನ್‌ಕೌಂಟರ್‌ ವಿಚಾರಕ್ಕೆ ಸಂಬಂಧಪಟ್ಟಂತೆ ಯೋಗಿ ಹಾಗೂ ಅವರ ಸರ್ಕಾರದ ನಡೆಗಳು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಯಾಕಂದ್ರೆ 2005ರ ಬಿಎಸ್‌ಪಿ ಶಾಸಕ ರಾಜ್‌ ಪಾಲ್‌ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೊಂದು ಎನ್‌ಕೌಂಟರ್‌ ಆಗಿದೆ. ರಾಜ್‌ ಪಾಲ್‌ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ್‌ ಪಾಲ್‌ರನ್ನ ಕಳೆದ ಫೆಬ್ರವರಿ 24ರಂದು ಹಾಡಹಗಲೇ ಗುಂಡಿನ ದಾಳಿ ಮಾಡಿ ಹತ್ಯೆ ಮಾಡಲಾಗಿತ್ತು. ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಈ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಯುಪಿಯಲ್ಲಿ ಸಿಎಂ ಯೋಗಿ ಆದಿತ್ಯನಾಥ್‌ ಅವ್ರ ಸರ್ಕಾರಕ್ಕೆ ಈ ಪ್ರಕರಣ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಯಾಕಂದ್ರೆ ಯೋಗಿ ಅಧಿಕಾರ ವಹಿಸಿಕೊಂಡ ಆರಂಭದಲ್ಲಿ ಗುಂಡಾಗಳ ವಿರುದ್ದ ಸಮರ ಸಾರಿ, ತಮ್ಮ ಬುಲ್ಡೋಜರ್‌ ಅಸ್ತ್ರದಿಂದ ಆರೋಪಿಗಳಿಗೆ ಭಯ ಹುಟ್ಟಿಸಿದ್ರು. ಆದ್ರೆ ಇತ್ತೀಚಿಗೆ ಯೋಗಿ ತಮ್ಮ ರಾಜ್ಯದಲ್ಲಿ ಆಕ್ಟಿವ್‌ ಇಲ್ಲ. ರಾಜ್ಯದಲ್ಲಿ ಮೊದಲಿನ ರೀತಿಯಲ್ಲೇ ಕಾನೂನು ಸುವ್ಯವಸ್ಥೆ ಹಾಳಾಗಿದೆ, ಹತ್ಯೆಗಳು ನಡೆಯುತ್ತಿವೆ ಅಂತ ಆರೋಪ ಮಾಡಲಾಗ್ತಿತ್ತು.ಅದಕ್ಕೆ ಪುಷ್ಟಿ ಕೊಡುವ ರೀತಿಯಲ್ಲಿ ಇತ್ತೀಚಿಗೆ ಉಮೇಶ್‌ ಪಾಲ್‌ ಹತ್ಯೆ ಕೂಡ ಆಗಿತ್ತು. ಈ ಪ್ರಕರಣವನ್ನ ಇಟ್ಕೊಂಡು ಯೋಗಿ ವಿರುದ್ದ ಅಲ್ಲಿನ ಪ್ರತಿಪಕ್ಷಗಳು ತೀವ್ರ ಆಕ್ರೋಶ ಹೊರಹಾಕಿದ್ವು. ಇದರ ಬೆನ್ನಲ್ಲೇ ಯೋಗಿ ವಿಧಾನಸಭೆಯಲ್ಲೇ ಎಲ್ಲರ ಮುಂದೆ ಮಾಫಿಯಾವನ್ನ ಮಣ್ಣು ಮಾಡೋದಾಗಿ ಪ್ರತಿಜ್ಞೆ ಮಾಡಿದ್ರು. ಯೋಗಿ ವಿಧಾನಸಭೆಯಲ್ಲಿ ಅಬ್ಬರಿಸಿದ ಮರುದಿನವೇ ಉಮೇಶ್‌ ಪಾಲ್ ಹತ್ಯೆಯಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿ ಅರ್ಬಾಜ್‌ನನ್ನ ಪೊಲೀಸರು ಎನ್‌ಕೌಂಟರ್‌ ಮಾಡಿದ್ರು. ಇದೀಗ ತಮ್ಮ ಬೇಟೆಯನ್ನ ಮುಂದುವರೆಸಿರೊ ಪೊಲೀಸರು ಇಂದು ಮತ್ತೊಬ್ಬ ಆರೋಪಿಯನ್ನ ಅದೇ ರೀತಿ ಎನ್‌ಕೌಂಟರ್‌ ಮಾಡಿದ್ದಾರೆ. ಅಜಯ್‌ ಅಲಿಯಾಸ್‌ ಉಸ್ಮಾನ್‌ ಅನ್ನೊ ಆರೋಪಿ ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿದ್ದಾನೆ. ಈತ ಉಮೇಶ್‌ ಪಾಲ್‌ ಮೇಲೆ ಮೊದಲ ಗುಂಡು ಹಾರಿಸಿದ್ದ ಎನ್ನಲಾಗಿದೆ. ಅಂದಹಾಗೆ ಉಮೇಶ್‌ ಪಾಲ್‌ ಹತ್ಯೆ ಪ್ರಕರಣದ ಆರೋಪಿಗಳ ಬೇಟೆಗಾಗಿ ಯೋಗಿ 2 ತಂಡಗಳನ್ನ ರಚಿಸಿದ್ರು. ಒಂದು, ಆರೋಪಿಗಳ ಆಸ್ತಿಗಳನ್ನ ಧ್ವಂಸ ಮಾಡುವ ಬುಲ್ಡೋಜರ್‌ ತಂಡ. ಇನ್ನೊಂದು ಆರೋಪಿಗಳನ್ನ ಹಿಡಿಯುವ ಪೊಲೀಸರ ತಂಡ. ಬುಲ್ಡೋಜರ್‌ ತಂಡ ಉಮೇಶ್‌ ಪಾಲ್ ಹತ್ಯೆಯನ್ನ ಪ್ಲ್ಯಾನ್‌ ಮಾಡಿದ್ದ ಮಾಸ್ಟರ್‌ಮೈಂಡ್ ಅತೀಕ್‌ ಅಹ್ಮದ್‌ ಅವ್ರ ಸಂಬಂಧಿಕರಿಗೆ ಸೇರಿರೊ ಮನೆಗಳನ್ನ ನೆಲಸಮ ಮಾಡೋಕೆ ಶುರು ಮಾಡ್ತು. ಫೆಬ್ರುವರಿ ಕೊನೆಯಿಂದ ಇಲ್ಲಿತನಕ ಒಟ್ಟು ಮೂರು ದಿನ ಮೂರು ಮನೆಗಳನ್ನ ನಾಶ ಮಾಡಲಾಗಿದೆ. ಈ ಕಡೆ ಆರೋಪಿಗಳನ್ನ ಹುಡುಕುವ ಪೊಲೀಸರ ತಂಡ ಕೂಡ ಕಾರ್ಯಾಚರಣೆಗೆ ಇಳಿದಿದ್ದು ಉಮೇಶ್‌ ಪಾಲ್‌ ಹತ್ಯೆ ಪ್ರಕರಣದ ಮತ್ತೊಬ್ಬ ಆರೋಪಿ ಅಜಯ್ ಉಸ್ಮಾನ್‌ನ್ನ ಈಗ ಅದೇ ರೀತಿ ಎನ್‌ಕೌಂಟರ್‌ ಮಾಡಿದ್ದಾರೆ. ಆರೋಪಿಗಳನ್ನ ಸದೆಬಡಿಯೋದಾಗಿ ನಾವು ಹೇಳಿದ್ವಿ. ಅದರಂತೆ ಉಮೇಶ್‌ ಪಾಲ್‌ಗೆ ಮೊದಲ ಗುಂಡು ಹಾರಿಸಿದ್ದ ಆರೋಪಿ ಇಂದು ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾನೆ ಅಂತ ಬಿಜೆಪಿ ಶಾಸಕ ಹಾಗೂ ಮುಖ್ಯಮಂತ್ರಿ ಸಲಹೆಗಾರ ಶಲಬ್‌ ಮಣಿ ತ್ರಿಪಾಠಿ ಹೇಳಿದ್ದಾರೆ. ಈ ಎನ್‌ಕೌಂಟರ್‌ ವಿಡಿಯೋಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈರಲ್‌ ಆಗಿವೆ. ವಿಡಿಯೋದಲ್ಲಿ ಉಸ್ಮಾನ್‌ ಗನ್‌ ತೆಗೆದು ಪೊಲೀಸರ ಮೇಲೆ ದಾಳಿ ಮಾಡ್ತಿರೋದು ಕಂಡುಬಂದಿದೆ.
ಇನ್ನು ಉಮೇಶ್‌ ಪಾಲ್‌ ಹತ್ಯೆಯಲ್ಲಿ ಅತೀಕ್‌ನನ್ನ ಹೊರತುಪಡಿಸಿ 7 ಆರೋಪಿಗಳು ಭಾಗಿಯಾಗಿದ್ರು. ಅದ್ರಲ್ಲಿ ಇಬ್ರನ್ನ ಎನ್‌ಕೌಂಟರ್‌ ಮಾಡಲಾಗಿದೆ. ಪ್ರಮುಖ ಆರೋಪಿ ಅತೀಕ್‌ ಅಹ್ಮದ್‌ ಜೈಲಿನಲ್ಲಿದ್ದಾನೆ. ಹಾಗೂ ಅರ್ಮಾನ್‌ ಅನ್ನೊ ಆರೋಪಿ ಸರೆಂಡರ್‌ ಆಗಿದ್ದಾನೆ ಅಂತ ಹೇಳಲಾಗಿದೆ. ಇನ್ನು ಅತೀಕ್‌ನ ಮಗ ಅಸಾದ್‌ ಸೇರಿದಂತೆ 4 ಆರೋಪಿಗಳು ತಲೆಮರೆಸಿಕೊಂಡಿದ್ದು, ಇವರ ಬಗ್ಗೆ ಸುಳಿವು ಕೊಟ್ಟವರಿಗೆ 2.5 ಲಕ್ಷ ರೂ. ಕೊಡೋದಾಗಿ ಯುಪಿ ಪೊಲೀಸರು ಘೋಷಿಸಿದ್ದಾರೆ.ಇನ್ನು ಇತ್ತ ಜೈಲಿನಲ್ಲಿರೋ ಅತೀಕ್‌ ಹಾಗೂ ಸರೆಂಡರ್‌ ಆಗಿರೋರನ್ನ ಅಲ್ಲಿಯೇ ವಿಚಾರಣೆ ನಡೆಸಬೇಕು. ಅವ್ರನ್ನ ಹೊರಗಡೆ ಕಳಿಸಬಾರ್ದು, ಅವರ ಜೀವಕ್ಕೆ ಅಪಾಯವಿದೆ ಅಂತ ಅತೀಕ್‌ನ ಕುಟುಂಬದವ್ರು ಸಿಎಂಗೆ ಮನವಿ ಮಾಡಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply