ಸ್ಪೈ ಬಲೂನ್‌ ಅವಾಂತರ! ಅಮೆರಿಕ-ಚೀನಾ ಸಂಬಂಧದಲ್ಲಿ ಬಿರುಕು!

masthmagaa.com:

ಚೀನಾದ ಬೇಹುಗಾರಿಕೆ ಅಥ್ವಾ ಸ್ಪೈ ಬಲೂನ್‌ ಅನ್ನ ಹೊಡೆದುರುಳಿಸಿದ್ದು ಅಮೆರಿಕ ಮತ್ತು ಚೀನಾದ ಸಂಬಂಧದ ಮೇಲೆ ಗಂಭೀರ ಪರಿಣಾಮ ಬೀರಿದೆ ಅಂತ ಚೀನಾ ಹೇಳಿದೆ. ಅಮೆರಿಕದ ಈ ನಡೆಯಿಂದ ಉಭಯ ದೇಶಗಳ ಸಂಬಂಧವನ್ನ ಸ್ಟೇಬಲ್‌ ಆಗಿ ಇಡೋ ಪ್ರಯತ್ನಕ್ಕೆ ಹಾನಿಯಾಗಿದೆ ಅಂತ ಚೀನಾದ ವಿದೇಶಾಂಗ ಸಚಿವಾಲಯ ಹೇಳಿದೆ. ಅಂದ್ಹಾಗೆ ಅಮೆರಿಕ ತನ್ನ F-22 ವಿಮಾನದಿಂದ ಕ್ಷಿಪಣಿಯೊಂದನ್ನ ಉಡಾಯಿಸಿ ಚೀನಾದ ಬಲೂನ್‌ನ್ನ ದಕ್ಷಿಣ ಕರೊಲಿನಾದ ಕರಾವಳಿ ಪ್ರದೇಶದಲ್ಲಿ ನಾಶಗೊಳಿಸಿದೆ. ಹೀಗಾಗಿ ಚೀನಾ ಇದಕ್ಕೆ ತಕ್ಕ ಉತ್ತರ ಕೊಡ್ತೀವಿ ಅಂತ ಕಿಡಿ ಕಾರ್ತಿದೆ. ಇನ್ನೊಂದ್‌ ಕಡೆ ಕೊಲಂಬಿಯಾ ವಾಯು ಪ್ರದೇಶದಲ್ಲೂ ಕೂಡ ಬಲೂನ್‌ ರೀತಿಯ ವಸ್ತು ಕಂಡು ಬಂದಿತ್ತು, ಅದು ಅಲ್ಲಿಂದ ಹೋಗೋವರೆಗು ಮಾನಿಟರ್‌ ಮಾಡಲಾಗಿತ್ತು ಅಂತ ಕೊಲಾಂಬಿಯಾ ಏರ್‌ಫೋರ್ಸ್‌ ತಿಳಿಸಿದೆ.

-masthmagaa.com

Contact Us for Advertisement

Leave a Reply